ಬದಿಯಡ್ಕ: ಬದಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಮಾನ್ಯ ಶ್ರೀಅಯ್ಯಪ್ಪ ಭಜನಾ ಮಂದಿರರದ ಬೀಗ ಒಡೆದು ಶ್ರೀಅಯ್ಯಪ್ಪ ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳ:ನ್ನು ಶುಕ್ರವಾರ ಸಂಜೆ ಮಾನ್ಯಕ್ಕೆ ಕರೆತಂದು ಸಾಕ್ಷ್ಯ ಸಂಗ್ರಹಿಸಲಾಯಿತು.
ಬಂಧಿತ ಆರೋಪಿಗಳಾದ ಫೈಸಲ್ ಹಾಗೂ ಇಬ್ರಾಹಿಂ ಅವರನ್ನು ಬದಿಯಡ್ಕ ಠಾಣಾಧಿಕಾರಿ ಪ್ರಸಾದ್ ಮತ್ತು ಪೋಲೀಸ್ ಸಿಬ್ಬಂದಿಗಳಾದ ಆರೀಫ್ ಮತ್ತು ನಿಖಿಲ್ ತಂಡ ಕರೆದಂದಸು ಮಂದಿರ ಪರಿಸರದಲ್ಲಿ ಸಾಕ್ಷ್ಯ ಸಂಗ್ರಹಿಸಿದರು. ಈ ವೇಳೆ ನೂರಾರು ಸ್ಥಳೀಯ ನಾಗರಿಕರು ನೆರೆದಿದ್ದರು.
ಆರೋಪಿಗಳನ್ನು ಸಮಗ್ರವಾಗಿ ತನಿಖೆಗೊಳಪಡಿಸಲಾಗುತ್ತಿದ್ದು, ದೇವರ ರಜತ ಪ್ರತಿಮೆ ಬೆಂಗಳೂರಿಗೆ ತಲುಪಿರುವ ಸೂಚನೆಗಳಿವೆ. ತನಿಖೆ ಸರಿಒಯಾದ ಹಾದಿಯಲ್ಲಿ ಸಾಗುತ್ತಿದ್ದು, ದೋಚಿರುವ ಅಯ್ಯಪ್ಪ ಪ್ರತಿಮೆಯನ್ನು ತರಲು ಪ್ರಯತ್ನಿಸಲಾಗುವುದು ಎಂದರು.
ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.