HEALTH TIPS

ಚಿನ್ಮಯ ವಿದ್ಯಾಲಯದಲ್ಲಿ ಕಿಂಡರ್ ಗಾರ್ಟನ್ ದಿನಾಚರಣೆ

ಕಾಸರಗೋಡು : ಮಕ್ಕಳ ಸಾಮರ್ಥವನ್ನು ಗುರುತಿಸಿ ಬೆಳೆಸುವಲ್ಲಿ ಪೆÇೀಷಕರ ಪಾತ್ರ ಮಹತ್ತರವಾದುದು. ಮಾತ್ರವಲ್ಲದೆ ಮಕ್ಕಳಿಗೆ ಕೊಡುವ ಆಹಾರವು ಅವರ ಉತ್ತಮ ಬೆಳವಣಿಗೆಗೆ ಮತ್ತು ಉತ್ತಮ ಸ್ವಭಾವವನ್ನು ರೂಪಿಸಲು ಸಹಕಾರಿಯಾಗುವುದು. ಹಾಗಾಗಿ ಕೊಡುವ ಆಹಾರದಲ್ಲಿ ಕಾಳಜಿ ವಹಿಸಬೇಕಾದದ್ದು ಅತ್ಯಂತ ಅವಶ್ಯಕವಾಗಿದೆ  ಎಂದು ಆಯುರ್ವೇದಿಕ್  ಹಾಗೂ ಪೌಷ್ಟಿಕ ತಜ್ಞರಾದ  ಡಾ. ಸೋಫಿಯಾ ಅವಿನಾಶ್ ಅಭಿಪ್ರಾಯಪಟ್ಟರು.

ಅವರು ಕಾಸರಗೋಡು ಚಿನ್ಮಯ ವಿದ್ಯಾಲಯದ ಕಿಂಡರ್ ಗಾರ್ಟನ್ ದಿನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ ರೂಪಿಸುವಲ್ಲಿ ವಿದ್ಯಾಲಯದ ಪಾತ್ರ ಮಹತ್ತರವಾದದ್ದು ಎಂದು ನುಡಿದರು. 


ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ  ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು  ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಅಡಗಿರುತ್ತದೆ . ಅದನ್ನು ನಿರ್ಲಕ್ಷಿಸದೆ ಗುರುತಿಸಿ ಪೆÇೀಷಿಸಬೇಕಾದದು ಪೆÇೀಷಕರ ಕರ್ತವ್ಯ ವಾಗಿದೆ. ಪೆÇೀಷಕರು ಮಕ್ಕಳಿಗಾಗಿ ತಮ್ಮ ಸಮಯವನ್ನು ಮೀಸಲಿರಿಸಿ, ಅವರ ಮನಸ್ಸಿಗೆ ಸಂತೋಷವನ್ನು ಕೊಡಬೇಕು ಎಂದು ಪೋಷಕರಿಗೆ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಸಿ, ಉಪ ಪ್ರಾಂಶುಪಾಲ  ಪ್ರಶಾಂತ.ಬಿ, ಬ್ರಹ್ಮಚಾರಿಣಿ ದಿಶಾ ಚೈತನ್ಯ, ಮುಖ್ಯೋಪಾಧ್ಯಾಯಿನಿಯರಾದ  ಪೂರ್ಣಿಮಾ ಎಸ್. ಆರ್ ಮತ್ತು ಸಿಂಧು ಶಶಿಂದ್ರನ್ ಉಪಸ್ಥಿತರಿದ್ದರು..

ಯು. ಕೆ. ಜಿ ಯ ವಿದ್ಯಾರ್ಥಿನಿಯರಾದ ವರದ. ಎನ್.ಬಿನು ಸ್ವಾಗತಿಸಿ, ಫಾತಿಮಾ ಜೆನಾ ವಂದಿಸಿದರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಪುಟಾಣಿ ಮಕ್ಕಳು ಪ್ರೇಕ್ಷಕರನ್ನು ರಂಜಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries