ಕಾಸರಗೋಡು : ಪರಿಶಿಷ್ಟ ವರ್ಗ ಅಭಿವೃದ್ಧಿ ಕಚೇರಿಯ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ ಟಿ ಪ್ರಮೋಟರ್‍ಗಳಿಗೆ ಒಂದು ದಿನದ ತರಬೇತಿ ಮತ್ತು ಎಸ್ ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸಮಾರಂಭ ಉದ್ಘಾಟಿಸಿದರು. ಪರಿಶಿಷ್ಟ ವರ್ಗದ ಉನ್ನತಿಗಳಲ್ಲಿ (ಕಾಲನಿ) ಸರಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಹಾಗೂ ಉನ್ನತಿಗಳಲ್ಲಿರುವ ಜನರ ಅಭಿವೃದ್ಧಿಗೆ ಪ್ರಮೋಟರ್‍ಗಳ ಪಾತ್ರ ಮಹತ್ತರವಾಗಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್, ಸ್ಥಳೀಯಾಡಳಿತ ಇಲಾಖೆ ಉಪನಿರ್ದೇಶಕ ಕೆ.ವಿ.ಹರಿದಾಸ್, ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಸಂಶೋಧನಾ ಸಹಾಯಕ ವಿ.ಕುಞÂಕೃಷ್ಣನ್ ತರಗತಿ ತೆಗೆದರು.
ಮಾಲಿನ್ಯ ಮುಕ್ತ ನವಕೇರಳಕ್ಕಾಗಿ ಜನಾಂದೋಲನ ಹಾಗೂ ಪರಿಶಿಷ್ಟ ವರ್ಗ ವಲಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ತರಗತಿ ನೀಡಲಾಯಿತು. ಪರಿಶಿಷ್ಟ ವರ್ಗ ಅಭಿವೃದ್ಧಿ ಅಧಿಕಾರಿ ಕೆ.ಕೆ.ಮೋಹನ್ ದಾಸ್, ಸಹಾಯಕ ಪರಿಶಿಷ್ಟ ವರ್ಗ ಅಭಿವೃದ್ಧಿ ಅಧಿಕಾರಿ ಕೆ.ವಿ.ರಾಘವನ್, ಪರಿಶಿಷ್ಟ ವರ್ಗ ವಿಸ್ತರಣಾಧಿಕಾರಿಗಳಾದ ವೀಣಾ ನಾರಾಯಣ.ಕೆ ಮತ್ತು ಕೆ. ವೀರೇಂದ್ರಕುಮಾರ್ ಉಪಸ್ಥಿತರಿದ್ದರು.