ಕಾಸರಗೋಡು ಜನಮೈತ್ರಿ ಪೋಲೀಸ್ ಮತ್ತು ಕಿಮ್ಸ್ ಆಸ್ಪತ್ರೆ ಕಾಸರಗೋಡು ಇದರ ಸಹಯೋಗದಲ್ಲಿ ಬಿಇಎಂ ಹೈಸ್ಕೂಲ್ ಎನ್‍ಸಿಸಿ ಮಕ್ಕಳಿಗೆ ಟ್ರೋಮಾ ಕೇರ್ ತರಬೇತಿ (ಪ್ರಥಮ ಚಿಕಿತ್ಸೆ) ಸೋಮವಾರ ನಡೆಯಿತು.
ಕಾಸರಗೋಡು ಪೆÇಲೀಸ್ ಠಾಣೆಯ ಮಕ್ಕಳ ಕಲ್ಯಾಣ ಅಧಿಕಾರಿ ಶಶಿಧರನ್ ಅಧ್ಯಕ್ಷತೆ ವಹಿಸಿದ್ದರು ಡಾಟ ಉμÁ ಮೆನೊನ್ ಕ್ಲಾಸ್ ಉದ್ಘಾಟಿಸಿದರು. ಬಿಇಎಂ ಪ್ರೌಢಶಾಲಾ ಸರ್ವಜನಿಕಾ ಶಿಕ್ಷಣ ರಕ್ಷಣಾ ಸಮಿತಿಯ ನಿರ್ದೇಶಕರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ರಾಜೇಶ್ವರಿ., ಎನ್‍ಸಿಸಿ ಶಿಕ್ಷಕಿ ರಕ್ಷಿತಾ ಟೀಚರ್ ಶುಭಾಶಂಸನೆಗೈದರು. ವೈದ್ಯ ಡಾನವಾಜ್ ಪ್ರಥಮ ಚಿಕಿತ್ಸಾ ತರಗತಿ ನಡೆಸಿದರು. ಕಿಮ್ಸ್ ಆಸ್ಪತ್ರೆ ಪಿಆರ್ ಒ ಸಿದ್ದಿಕ್ ಸ್ವಾಗತಿಸಿ, ಜನಮೈತ್ರಿ ಬೀಟ್ ಅಧಿಕಾರಿ ಸಂತೋಷ್ ವಂದಿಸಿದರು.