ಕಾಸರಗೋಡು: ವಿದ್ಯಾರ್ಥಿಗಳು ಸ್ಪಷ್ಟಗುರಿಯೊಂದಿಗೆ ಸಾಗುವ ಮೂಲಕ ಅದರಲ್ಲಿ ಯಶಸ್ಸುಪಡೆಯಲು ಶ್ರಮಿಸಬೇಕು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಐಪಿಎಸ್ ತಿಳಿಸಿದರು. ಅವರು ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ಚೇಂಬರ್‍ಗೆ ಭೇಟಿ ನೀಡಿದ ನಾಯಮರ್‍ಮೂಲೆ ತನ್‍ಬೀಹುಲ್ ಹೈಯರ್ ಸೆಕೆಂಡರಿ ಶಾಲೆಯ ಟಿಐಎಚ್‍ಎಸ್‍ಎಸ್ ಶಾಲೆಯ ಹಿರಿಯ ಸ್ಟೂಡೆಂಟ್ ಪೊಲೀಸ್ ಕೋರ್(ಎಸ್‍ಪಿಸಿ) ಕೆಡೆಟ್‍ಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಸಮಾಜದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ವಿದ್ಯಾರ್ಥಿಗಳು ಎಂಡಿಎಂಎ, ಗಾಂಜಾದಂತಹ ಮಾರಕ ಮಾದಕ ವ್ಯಸನದ ವಿರುದ್ಧ ಹೋರಾಡುವ ಯೋಧರಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹೊಂದಿ ಅದನ್ನು ಸಾಧಿಸಲು ನಿರಂತರ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು. ಎಸ್‍ಪಿಸಿ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಹೆಚ್ಚುವರಿ ಎಸ್ಪಿ ಪಿ. ಬಾಲಕೃಷ್ಣನ್ ನಾಯರ್, ವಿಶೇಷ ಬ್ರಾಂಚ್ ಡಿವೈಎಸ್ಪಿ ಎಂ ಸುನೀಲಕುಮಾರ್, ಎಸ್ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ ತಂಬಾನ್, ಸಮುದಾಯ ಪೋಲೀಸ್ ಅಧಿಕಾರಿ ಇಲ್ಯಾಸ್ ಮಾಸ್ಟರ್, ಡ್ರಿಲ್ ಬೋಧಕರಾದ ಪ್ರಶಾಂತ್ ಎನ್.ಆರ್, ಪ್ರಸೀತಾ ಟಿ ಮತ್ತು ಯೋಜನಾ ಸಹಾಯಕ ಶ್ಯಾಮ್ ಕೃಷ್ಣನ್ ಉಪಸ್ಥಿತರಿದ್ದರು.
ನಂತರ ಜಿಲ್ಲಾ ಕೇಂದ್ರದಲ್ಲಿರುವ ಪೆÇಲೀಸ್ ಶ್ವಾನದಳಕ್ಕೆ ಕೆಡೆಟ್‍ಗಳು ಭೇಟಿ ನೀಡಿದರು. ಪೋಲೀಸ್ ನಾಯಿ ಹೇಗೆ ಸ್ನಿಫ್ ಮಾಡಿ ಬಾಂಬ್, ಡ್ರಗ್ಸ್ ಇತ್ಯಾದಿಗಳನ್ನು ಹೇಗೆ ಪತ್ತೆ ಮಾಡುತ್ತದೆ ಎಂಬುದನ್ನು ಶ್ವಾನಗಳ ತರಬೇತುದಾರ ಕುಮಾರ್ ಮತ್ತು ಸುಜಿತ್ ವಿವರಿಸಿದರು. ಹಿರಿಯ ಪೆÇಲೀಸ್ ಅಧಿಕಾರಿ ಬಿಜುಮೋನ್ ಪಿ ಜಿಲ್ಲಾ ಸಶಸ್ತ್ರ ಪಡೆಗಳ ಶಿಬಿರದಲ್ಲಿ ಕೆಡೆಟ್‍ಗಳಿಗೆ ಶಸ್ತ್ರಾಸ್ತ್ರಗಳು, ಬಂದೂಕುಗಳು, ವಿವಿಧ ರೀತಿಯ ಗ್ರೆನೇಡ್‍ಗಳು ಮತ್ತು ಶೆಲ್‍ಗಳನ್ನು ಪರಿಚಯಮಾಡಿಕೊಟ್ಟರು.