ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು 'ಏಕ್ ಹೈ ತೊ ಸೇಫ್ ಹೈ' (ಒಗ್ಗಟ್ಟಿನಿಂದ ಇದ್ದರೆ ನಾವು ಸುರಕ್ಷಿತವಾಗಿರುತ್ತೇವೆ) ನಿರೂಪಣೆಯನ್ನು ಪುನರುಚ್ಚರಿಸಿದ್ದು, 'ಕಾಂಗ್ರೆಸ್ ಪಕ್ಷವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯವನ್ನು ವಿಭಜಿಸುತ್ತಿದೆ' ಎಂದು ಆರೋಪಿಸಿದರು.

'ಏಕ್ ಹೈ ತೊ ಸೇಫ್ ಹೈ ನಿರೂಪಣೆಯನ್ನು ಜನರು ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ. ವಾಸ್ತವವಾಗಿ ಅದು ಜನರ ಮನಸ್ಸಿನಲ್ಲಿತ್ತು. ನಾನು ಅದಕ್ಕೆ ಧ್ವನಿ ನೀಡಿದ್ದೇನೆ' ಎಂದು 'ನಮೋ ಆಯಪ್' ಮೂಲಕ ಮಹಾರಾಷ್ಟ್ರದ ಬಿಜೆಪಿ ಕಾರ್ಯಕರ್ತರ ಜತೆಗಿನ ಸಂವಾದದಲ್ಲಿ ಅವರು ಹೇಳಿದರು.
'ಮೇರಾ ಬೂತ್ ಸಬ್‌ಸೆ ಮಜ್‌ಬೂತ್' ಅಭಿಯಾನದ ಅಂಗವಾಗಿ ಶನಿವಾರ ನಡೆದ ಸಂವಾದದ ವೇಳೆ ಪ್ರಧಾನಿ ಅವರು ಕಾಂಗ್ರೆಸ್ ಮತ್ತು ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
'ಕಾಂಗ್ರೆಸ್‌ಗೆ ತನ್ನ ಇತಿಹಾಸ ಗೊತ್ತಿದೆ. ದೇಶದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಲ್ಲಿ ಜಾಗೃತಿ ಮೂಡುವವರೆಗೂ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತಿತ್ತು' ಎಂದು ಹೇಳಿದರು.
'ಆದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ಒಗ್ಗೂಡಿದ ದಿನದಿಂದಲೂ ಕಾಂಗ್ರೆಸ್‌ನ ಶಕ್ತಿ ಕ್ಷೀಣಿಸತೊಡಗಿತು. ಆದ್ದರಿಂದ ಕಾಂಗ್ರೆಸ್‌ನ ವಿರುದ್ಧ ಯಾವುದೇ ಶಕ್ತಿ ಉಳಿಯಬಾರದು ಎಂಬ ಕಾರಣ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳನ್ನು ಒಡೆಯಲು ಬಯಸಿದೆ' ಎಂದು ಟೀಕಿಸಿದರು.
-ನರೇಂದ್ರ ಮೋದಿ, ಪ್ರಧಾನಿ'ಮಹಾಯುತಿ' ಸರ್ಕಾರವು ಸಮಾಜದ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ.