ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಪುರಾತನ ಕಾಲದಿಂದಲೂ ಅಡಿಕೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಶುಭ ಸಮಾರಂಭ ಗಳಲ್ಲಿ ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ಸೇರಿಸಿ ತಾಂಬೂಲ ನೀಡುವುದು ಭಾರತೀಯ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಆಯುರ್ವೇದ ಶಾಸ್ತ್ರದಲ್ಲಿಯೂ ಅಡಿಕೆಗೆ ಅದರ ಔಷದೀಯ ಗುಣಗಳಿಂದಾಗಿ ವಿಶೇಷ ಸ್ಥಾನಮಾನವಿದೆ.ಅಡಿಕೆ ಕಫ ಮತ್ತು ಪಿತ್ತದ ಸಮಸ್ಯೆ ಶಮನಗೊಳಿಸುವ ಮತ್ತು ಜೀರ್ಣಕ್ರೀಯೆಯನ್ನು ಉದ್ದೀಪನಗೊಳಿಸುವ ಗುಣ ಹೊಂದಿದೆ. ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವರದಿ ಅಡಿಕೆ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಅಡಿಕೆ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಬೆಳೆಗಾರರ ಹಿತ ರಕ್ಷಣೆಗೆ ಶ್ರಮಿಸುತ್ತಿರುವ ಕ್ಯಾಂಪ್ಕೊ ಗೆ ಕಾನೂನಾತ್ಮಕ ತೊಂದರೆಗಳನ್ನು ಅನುಭವಿಸುವಂತಾಗಿದೆ. ಕಾನೂನಾತ್ಮಕ ತೊಂದರೆಗಳನ್ನು ಅನುಭವಿಸುವಂತಾಗಿದೆ. ಐಎಆರ್‌ಸಿ ವರದಿಗಳು ಸಂಶೋಧನೆಗಳ ಸಂಪೂರ್ಣ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಹಾಗಾಗಿ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟಿರಬಹುದು.ಹಾಗಾಗಿ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟಿರಬಹುದು ಅಥವಾ ವರದಿಗಳನ್ನು ತಿರುಚಿರಬಹುದೆಂಬ ಸಂಶಯ ಮೂಡುತ್ತಿದೆ. ಪುರಾತನ ಕಾಲದಿಂದಲೂ ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಜನ ಸಾಮಾನ್ಯರಿಗೂ ಅರಿವು ಇದೆ.
ಹೀಗಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯ ಉಪಯೋಗದ ಬಗೆಗಿನ ನೈಜ ವರದಿಗಳನ್ನು ಗಣನೆಗೆ ತೆಗೆದು ಕೊಳ್ಳದೆ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿರುವುದಕ್ಕೆ ಕ್ಯಾಂಪ್ಕೊ ಖಂಡನೆಯನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.
ಕ್ಯಾಂಪ್ಕೊ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಿದ್ದು ,ಅವುಗಳ ವರದಿಗಳೆಲ್ಲಾ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಬದಲಾಗಿ ರೋಗವನ್ನು ಶಮನಗೊಳಿಸುವ ಔಷದೀಯ ಗುಣಗಳನ್ನು ಹೊಂದಿರುವ ಬಗ್ಗೆ ದೃಢಪಡಿಸಿದೆ.1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ನಡೆಸಿದ ಅಧ್ಯಯನವು ತಂಬಾಕು ರಹಿತ ಅಡಿಕೆ ಮತ್ತು ವೀಳ್ಯದೆಲೆಯ ಸೇವನೆಯಿಂದ ಯಾವುದೇ ಟ್ಯೂಮರ್‌ಗಳು ಉಂಟಾಗಿರುವುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಬದಲಾಗಿ ಟ್ಯೂಮರ್‌ಗಳ ಬೆಳವಣಿಗೆಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವುದು ಕಂಡುಬಂದಿದೆ.
2016ರಲ್ಲಿ ಅಮೆರಿಕಾದ ವಿನ್‌ಶಿಪ್ ಕ್ಯಾನ್ಸರ್ ಇನ್‌ಸ್ಟಿ ಟ್ಯೂಟ್ ಆಫ್ ಎಮೆರಾಯ್ ಯೂನಿವರ್ಸಿಟಿ ಅಟ್ಲಾಂಟ ಇದರ 25 ಮಂದಿ ತಂಡವು ನಡೆಸಿದ ಅಧ್ಯಯನವು ಅಡಿಕೆಯಿಂದ ತೆಗೆದ ಸಾರವು ಹೆಪಟೋಸೆಲ್ಯುಲರ್ ಕ್ಯಾನ್ಸರ್‌ಗೆ ಸಂಬಂಧಿಸಿ ದಂತೆ ಟ್ಯೂಮರ್ ಬೆಳವಣಿಗೆಯನ್ನು ತಡೆಯುವ ಗುಣಹೊಂದಿದೆ ಎಂಬುದಾಗಿ ವರದಿ ನೀಡಿದೆ.
2022ರಲ್ಲಿ ನಿಟ್ಟೆ ಯುನಿವರ್ಸಿಟಿ ಸಂಶೋಧನೆ ನಡೆಸಿದ್ದು ಅವರ ಅಧ್ಯಯನವೂ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವಾದವನ್ನು ಪುಷ್ಠೀಕರುಸಿದೆ. 2023ರಲ್ಲಿ ಇಂಡೋನೇಷಿಯಾದಲ್ಲಿ ಯುನಿವರ್ಸಿಟಾಸ್ ಸಿಯಿಯಾ ಕೌಲಾ ಓರಲ್ ಮೆಡಿಸಿನ್ ಡಿಪಾರ್ಟ್ ಮೆಂಟ್‌ನ ಸಾರು ಮತ್ತು ಇತರರು ನಡೆಸಿದ ಅಧ್ಯಯನವು ಅಡಿಕೆಯಿಂದ ತೆಗೆದ ಸಾರವು ವಿವಿಧ ರೋಗಗಳ ವಿರುದ್ಧ ಸಕರಾತ್ಮಕ ಮತ್ತು ಪರಿಣಾಮಕಾರಿ ಫಲಿತಾಂಶ ನೀಡಿದ ಬಗ್ಗೆ ವರದಿ ನೀಡಿದ್ದಾರೆ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಕ್ಯಾಂಪ್ಕೊ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ.ವಿ.ಸತ್ಯನಾರಾಯಣ ಹಾಗೂ ಎಆರ್‌ಡಿಎಫ್‌ನ ಡಾ.ಕೇಶವ ಭಟ್ ಅವರು ಭೇಟಿ ಮಾಡಿ ಚರ್ಚಿಸಿದಾಗ ಅವರು , ಐಸಿಎಂಆರ್ ಮತ್ತು ಐಸಿಎಆರ್‌ನಲ್ಲಿ ಸಂಶೋಧನೆ ನಡೆಸಿ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವಾದವನ್ನು ಸಮರ್ಥವಾಗಿ ಪ್ರಶ್ನಿಸುವಂತೆ ಸಲಹೆ ನೀಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ನಿಲುವನ್ನು ಮರುಪರಿಶೀಲಿಸುವಂತೆ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರಿ ಮಾನ್ಯತೆ ಪಡೆದ ಹಾಗೂ ನುರಿತ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡು ವಂತೆ ಕೇಂದ್ರ ಸರಕಾರಕ್ಕೆ ರೈತರ ಪರವಾಗಿ ಕ್ಯಾಂಪ್ಕೊ ಮನವಿ ಮಾಡಿದೆ ಎಂದು ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ನಿಲುವನ್ನು ಮರುಪರಿಶೀಲಿಸುವಂತೆ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರಿ ಮಾನ್ಯತೆ ಪಡೆದ ಹಾಗೂ ನುರಿತ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡು ವಂತೆ ಕೇಂದ್ರ ಸರಕಾರಕ್ಕೆ ರೈತರ ಪರವಾಗಿ ಕ್ಯಾಂಪ್ಕೊ ಮನವಿ ಮಾಡಿದೆ ಎಂದು ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.