ಕಾಸರಗೋಡು: ಕಾಞಂಗಾಡು ರೈಲು ನಿಲ್ದಾಣ ಆಸುಪಾಸು ರೈಲು ಪ್ರಯಾಣ ಮಧ್ಯೆ ಪಾಲಿಸಬೇಕಾದ ಸುರಕ್ಷತಾ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ರೈಲ್ವೆ ನಿಲ್ದಾಣ ವಠಾರದಲ್ಲಿ ಆಯೋಜಿಸಲಾಗಿತ್ತು.
ಕಾಞಂಗಾಡ್ ರೈಲ್ವೆ ನಿಲ್ದಾಣದಲ್ಲಿ ರೈಲು ಹಳಿ ದಾಟುವ ಪ್ರಯಾಣಿಕರು ಮತ್ತು ಸಮೀಪದ ನಿವಾಸಿಗಳ ಸುರಕ್ಷತೆಗಾಗಿ ರೈಲ್ವೇ ಪೆÇ್ರಟೆಕ್ಷನ್ ಫೆÇೀರಂ, ಕಾಞಂಗಾಡ್ ರೈಲ್ವೇ ಪೆÇ್ರಟೆಕ್ಷನ್ ಫೆÇೀರ್ಸ್, ಕಾಸರಗೋಡು ರೈಲ್ವೇ ಪೆÇಲೀಸ್, ಕಾಸರಗೋಡು ತೆಕೆಪ್ಪುರಂ ವಾಟ್ಸಪ್ ಗ್ರೂಪ್ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಞಂಗಾಡ್ ರೈಲ್ವೇ ನಿಲ್ದಾಣದಲ್ಲಿ ಅಸುರಕ್ಷಿತವಾಗಿ ಹಳಿದಾಟುವ ಮಧ್ಯೆ ಹಲವು ಮಂದಿ ಜೀವಕಳೆದುಕೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಞಂಗಾಡು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಸಮಾರಂಭ ಉದ್ಘಾಟಿಸಿದರು. ರೈಲ್ವೆ ಸಂರಕ್ಷಣಾ ವೇದಿಕೆಯ ಸಂಯೋಜಕ ಸಿ.ಕೆ.ನಾಸರ್ ಅಧ್ಯಕ್ಷತೆ ವಹಿಸಿದ್ದರು. ರೈಲ್ವೇ ರಕ್ಷಣಾ ಪಡೆಯ ಸಬ್ ಇನ್ಸ್ ಪೆಕ್ಟರ್ ಕದಿರೇಶ್ ಬಾಬು ಹಾಗೂ ಕೇರಳ ರೈಲ್ವೇ ಪೆÇಲೀಸ್ ಪಿಆರ್ ಒ ಮಹೇಶ್ ರೈಲ್ವೆ ಸುರಕ್ಷತೆ ಬಗ್ಗೆ ತರಗತಿ ನಡೆಸಿದರು. ದಿಲೀಪ್ ಮೆಡಯಿಲ್, ಟಿ ಅಬ್ದುಲ್ ಸಮದ್, ನಸೀಮಾ ಟಿ, ಥಾಮಸ್, ಶಬೀರ್ ಹಸನ್, ಶುಕೂರ್ ಅತೀಂಜಲ್, ಮಹೇಶ್ ವಿ.ಕೆ. ರಾಜನ್ ಕೆ, ಮಹೇಶ್ ಸಿ.ಕೆ ಉಪಸ್ಥಿತರಿದ್ದರು. ಇಬ್ರಾಹಿಂ ಮೂಲಕ್ಕಡಂ ಸ್ವಾಗತಿಸಿದರು. ಶಶಿಕುಮಾರ್ ವಂದಿಸಿದರು. ಮುಹಮ್ಮದ್ ಜೂನಿಯರ್ ಬೆಸ್ತೋ ವಂದಿಸಿದರು.
ಈ ಸಂದರ್ಭ ರೈಲು ನಿಲ್ದಾಣದ ಎಲ್ಲ ಪ್ರಯಾಣಿಕರಿಗೆ ರೈಲ್ವೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನೋಟಿಸ್ ವಿತರಿಸಲಾಯಿತು. ಮಹಿಳಾ ಪ್ರಯಾಣಿಕರು ಸಂಘಟಕರು ಮತ್ತು ರೈಲ್ವೆ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದರು.