HEALTH TIPS

ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ವಿಚಿತ್ರ ಶಬ್ದ! ಇಣುಕಿ ನೋಡಿದ ಕುಟುಂಬಸ್ಥರಿಗೆ ಕಾದಿತ್ತು ಬೆಚ್ಚಿಬೀಳುವ ಸಂಗತಿ

 ಜುಕೋನ್,: ಹಿತ್ತಲಿನಲ್ಲಿದ್ದ ಬಾವಿಯಿಂದ ಯಾರೋ ಗೊಣಗುತ್ತಿರುವ ಶಬ್ದ ಕೇಳಿ ಗಾಬರಿಗೊಂಡ ಮನೆಯವರು, ಮೊದ ಮೊದಲು ಕೇಳಿಬಂದ ಶಬ್ದಕ್ಕೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ, ನಂತರದಲ್ಲಿ ಆಲಿಸಲಾದ ಧ್ವನಿಗೆ ಮನೆಯಿಂದ ಹೊರಬಂದು ನೋಡಿದ ಕುಟುಂಬಸ್ಥರು, ಬಾವಿಯ (Well) ಕಡೆ ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಈ ವೇಳೆ ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ಹನಿ ನೀರು ಇಲ್ಲದೆ ಇರುವುದನ್ನು ಕಂಡು ಎಲ್ಲರೂ ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ.

ಮರು ಪರಿಶೀಲನೆ

ಶುಕ್ರವಾರ (ನ.01) ರಾತ್ರಿ ಎಂಟು ಗಂಟೆ ಸುಮಾರಿಗೆ ಎಜುಕೋನ್ ಮೂಝಿ ಪ್ರದೇಶದ ಕಲ್ಯಾಣಿಯಲ್ಲಿರುವ ಸುನಿಲ್ದತ್ ಅವರ ಮನೆಯ ಹಿತ್ತಲಿನ ಬಾವಿಯಲ್ಲಿ ಈ ವಿಚಿತ್ರ ಘಟನೆ ಕುಟುಂಬಸ್ಥರನ್ನು ಭಾರೀ ಆತಂಕ ಹಾಗೂ ಬೆಚ್ಚಿ ಬೀಳಿಸಿದೆ. ಮಳೆ ಸುರಿಯುತ್ತಿದ್ದ ಕಾರಣ ಕುಟುಂಬ ಸದಸ್ಯರು ಮನೆಯೊಳಗೆ ಇದ್ದರು. ಆರಂಭದಲ್ಲಿ ಹೊರಗಿನಿಂದ ಯಾರೋ ಕೂಗುವ ಸದ್ದು ಕೇಳಿ ಬಂದಿದೆ. ತಕ್ಷಣವೇ ಅನುಮಾನಗೊಂಡ ಮನೆಯವರು, ಹೊರಗೆ ಹೋಗಿ ನೋಡಿದರೆ ಏನೂ ಪತ್ತೆಯಾಗಿಲ್ಲ. ಶಬ್ದ ಹೆಚ್ಚಾದಾಗ ಮತ್ತೆ ಮರು ಪರಿಶೀಲನೆ ಮಾಡಿದಾಗ ಶಬ್ದ ಬಾವಿಯ ಒಳಗಿನಿಂದ ಕೇಳಿಬರುತ್ತಿದ್ದನ್ನು ಗಮನಿಸಿದ್ದಾರೆ.

ನೀರು ಖಾಲಿಯಾಗಿದ್ದೇಗೆ?

ಕೂಡಲೇ ಬಾವಿಯೊಳಗೆ ಯಾವುದೋ ನಾಯಿ ಬಿದ್ದಿರಬಹುದು ಎಂಬ ಅನುಮಾನದಿಂದ ಇಣುಕಿ ನೋಡಿದರೆ, ಅಚ್ಚರಿಯಂತೆ ಬಾವಿಯಲ್ಲಿ ಒಂದು ಹನಿ ನೀರು ಇರಲಿಲ್ಲ. ಇದರಿಂದ ಬೆಚ್ಚಿ ಬಿದ್ದ ಕುಟುಂಬಸ್ಥರು, ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ನೀರು ಇಲ್ಲದೆ ಇರುವುದು ಹೇಗೆ? ಇದಕ್ಕೆ ಕಾರಣವೇನು? ಅಸಲಿಗೆ ನೀರು ಖಾಲಿಯಾಗಿದ್ದೇಗೆ ಹಾಗೂ ಶಬ್ದ ಬರುತ್ತಿರುವುದು ಎಲ್ಲಿಂದ ಎಂಬ ಹತ್ತಾರು ಪ್ರಶ್ನೆಗಳಿಂದ ತಲೆಕಡಿಸಿಕೊಂಡಿದ್ದರು. ಈ ಘಟನೆ ಬಗ್ಗೆ ಮಾತನಾಡಿದ ರಜನಿ, 'ನಾನು ಸೌಂಡ್​ ಕೇಳ್ತಿದ್ದಂತೆ ಹೊರಗೆ ಓಡಿ ಬಂದೆ. ಆಗ ಬಾವಿಯ ತಳವು ಕಾಣಿಸುತ್ತಿತ್ತು. ಅಲ್ಲಿ ನೀರು ಇರಲಿಲ್ಲ, ಶಬ್ದದ ಹಿಂದಿರುವ ಕಾರಣವು ಕಂಡುಬರಲಿಲ್ಲ' ಎಂದು ಆತಂಕ ವ್ಯಕ್ತಪಡಿಸಿದರು.

ಜಲವಿಜ್ಞಾನಿಗೆ ಕರೆ

ಈ ಘಟನೆ ಬೆನ್ನಲ್ಲೇ ಭಯಗೊಂಡು ಅಂತರ್ಜಲ ಇಲಾಖೆಯ ಜಲವಿಜ್ಞಾನಿ ಎಸ್. ಅನುಜಾ ನೇತೃತ್ವದ ತಜ್ಞರ ತಂಡಕ್ಕೆ ಕರೆ ಮಾಡಿದ ವಾರ್ಡಂಗಂ ರಂಜಿನಿ ಅಜಯನ್, ತಕ್ಷಣವೇ ತಮ್ಮ ಮನೆಯ ಬಾವಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಘಟನೆಯನ್ನು ವಿವರಿಸಿದ್ದಾರೆ. ರಂಜಿನಿ ಅವರ ದೂರವಾಣಿ ಕರೆಯ ಮೇರೆಗೆ ಸ್ಥಳಕ್ಕೆ ಆಗಮಿಸಿ ಬಾವಿಯನ್ನು ಪರಿಶೀಲಿಸಿದ ಅನುಜಾ ತಂಡ, ರಚನಾತ್ಮಕ ದೋಷ ಉಂಟಾಗಿರುವ ಸುಳಿಯಲ್ಲಿ ನೀರು ಹರಿದಿದ್ದರಿಂದ ಬಾವಿಯ ಕೆಳಭಾಗದಲ್ಲಿ ಕೆಸರು ಉಂಟಾಗಿದೆ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ ಎಂದು ತಿಳಿಸಿದೆ. ನಿಖರವಾದ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ ಪರೀಕ್ಷೆಗಳನ್ನು ಮಾಡುವ ಅಗತ್ಯವಿದೆ ಎಂದು ಜಲವಿಜ್ಞಾನಿ ಹೇಳಿದ್ದಾರೆ. ಇಷ್ಟಾದ ಬಳಿಕ ನಿನ್ನೆ ಸಂಜೆ ವೇಳೆಗೆ ಮತ್ತೆ ಬಾವಿಯಲ್ಲಿ ನೀರು ಬರಲಾರಂಭಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries