HEALTH TIPS

ಉದ್ಯಮಿಯ ನಿಗೂಢ ಸಾವು : ನಿರ್ಣಾಯಕ ಹಂತಕ್ಕೆ ತಲುಪಿದ ತನಿಖಾ ತಂಡ

ಕಾಸರಗೋಡು: ಪಳ್ಳಿಕೆರೆ ಪೂಚಕ್ಕಾಡ್‍ನಲ್ಲಿ ಅನಿವಾಸಿ ಭಾರತೀಯನ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿರುವುದಾಗಿ ತಿಳಿದು ಬಂದಿದೆ. ತನಿಖೆ ಪೂರ್ಣಗೊಳ್ಳುವುದ ರೊಂದಿಗೆ ಮನೆಯಿಂದ ಕಳವಿಗೀಡಾದ ಸುಮಾರು ನಾಲ್ಕು ಕಿಲೋ ಚಿನ್ನಾಭರಣಗಳು ಏನಾದವು ಎಂಬ ಬಗ್ಗೆ ಉತ್ತರ ಲಭಿಸಬಹುದೆಂಬ ನಿರೀಕ್ಷೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.

ಅನಿವಾಸಿ ಉದ್ಯಮಿಯಾಗಿದ್ದ ಪೂಚಕ್ಕಾಡ್‍ನ ಎಂ.ಸಿ. ಅಬ್ದುಲ್ ಗಫೂರ್ (55) 2023 ಎಪ್ರಿಲ್ 14ರಂದು ಮುಂಜಾನೆ ಮನೆಯ ಬೆಡ್‍ರೂಂನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 

ಸಹಜ ಸಾವು ಎಂಬ ನೆಲೆಯಲ್ಲಿ ಶವವನ್ನು ದಫನ ಮಾಡಲಾಗಿತ್ತು. ಬಳಿಕ ಸಾವಿನಲ್ಲಿ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. 

ಮೊದಲು ಸ್ಥಳೀಯ ಪೆÇಲೀಸರು ಪ್ರಕರಣದ ತನಿಖೆ ನಡೆಸಿದ್ದಾದರೂ ಬಳಿಕ ಕ್ರಿಯಾ ಸಮಿತಿಯ ಒತ್ತಡದಿಂದ ಜಿಲ್ಲಾ ಕ್ರೈಂ ಬ್ರಾಂಚ್‍ಗೆ ತನಿಖೆ ಹಸ್ತಾಂತರಿಸಲಾಗಿತ್ತು. ಆದರೆ ಕ್ರೈಂ ಬ್ರಾಂಚ್ ತನಿಖೆ ಯಲ್ಲಿ ಹೆಚ್ಚಿನ ಪುರೋಗತಿ ಕಂಡು ಬಂದಿರಲಿಲ್ಲ. ಇದರಿಂದ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಿ. ಶಿಲ್ಪಾರ ನಿರ್ದೇಶ ಪ್ರಕಾರ ಡಿಸಿಆರ್‍ಬಿ ಡಿವೈಎಸ್ಪಿ ಜೋನ್ಸನ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರೂಪೀಕರಿಸಲಾಗಿತ್ತು.

 ತನಿಖೆಯ ಭಾಗವಾಗಿ 40ಕ್ಕೂ ಮಿಕ್ಕ ಮಂದಿಯನ್ನು ವಿಚಾರಣೆ ಗೊಳಪಡಿಸಲಾಗಿದೆ. ಇದರಿಂದ ಅಬ್ದುಲ್ ಗಫೂರ್‍ರ ಸಾವಿಗೆ ಸಂಬಂಧಿಸಿ ನಿರ್ಣಾಯಕ ಮಾಹಿತಿ ಲಭಿಸಿದೆಯೆನ್ನಲಾಗುತ್ತಿದ್ದು, ಇದರ ಮುಂದುವರಿಕೆಯಾಗಿ ಮುಂದಿನ ದಿನಗಳಲ್ಲಿ ಕೆಲವು ಮಂದಿಯನ್ನು ತನಿಖೆಗೊಳಪಡಿಸಲಿದ್ದು, ಈ ವೇಳೆ ಪೂರ್ಣ ಮಾಹಿತಿ ಲಭಿಸಬಹುದೆಂಬ ನಿರೀಕ್ಷೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries