ಕುಂಬಳೆ: ಯುವಕನನ್ನು ಅಪಹರಿಸಿ ಹಲ್ಲೆಗೈದು ಕೊಲೆಗೆ ಯತ್ನಿಸಿದ ಪ್ರಕರಣದ ಮುಖ್ಯ ಆರೋಪಿ ಉಪ್ಪಳ ಅಂಬಾರು ನಿವಾಸಿ ಇರ್ಷಾದ್(33)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಬಪ್ಪಾಯಿತೊಟ್ಟಿ ಹನಫಿ ಮಸೀದಿ ಸನಿಹದ ನಿವಾಸಿ ಮಹಮ್ಮದ್ ಫಾರೂಕ್ ಎಂಬಾತನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.ಪ್ರಕರಣಕರ್ಕೆ ಸಂಬಂಧಿಸಿ ಕಿರಣ್‍ರಾಜ್ ಶೆಟ್ಟಿ, ಸಹೋದರ ವರುಣ್‍ರಾಜ್ ಶೆಟ್ಟಿ ಹಾಗೂ ರೂಪೇಶ್ ಎಂಬವರನ್ನು ಈ ಹಿಂದೆ ಬಂಧಿಸಲಾಗಿತ್ತು. ಇರ್ಷಾದ್ ತಲೆಮರೆಸಿಕೊಂಡಿದ್ದನು. ಏ. 2ರಂದು ಮಹಮ್ಮದ್ ಫಾರೂಕ್‍ನನ್ನು ಬಂಬ್ರಾಣಬಯಲು ಸನಿಹದ ಮನೆಯಿಂದ ಅಪಹರಿಸಿದ ತಂಡ ಗಂಭೀರವಾಗಿ ಹಲ್ಲೆಗೈದು ಮತ್ತೆ ಮನೆ ಬಳಿ ಬಿಟ್ಟು ಪರಾರಿಯಾಗಿತ್ತು. ಬೆಂಗಳೂರಿಗೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿ ಇರ್ಷಾದ್‍ನನ್ನು ಪೊಲೀಸರು ಅಲ್ಲಿಂದ ಸೆರೆಹಿಡಿದಿದ್ದರು. ಪ್ರಕರಣದ ಇನ್ನೊಬ್ಬ ಆರೋಪಿ ಕಿರಣ್‍ರಾಜ್ ಶೆಟ್ಟಿಗೆ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯ ವಾರದ ಹಿಂದೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿತ್ತು.