ಬಾಕು: ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ಹವಾಮಾನ ನಿಧಿಯಾಗಿ ನೀಡಲಿರುವ 300 ಬಿಲಿಯನ್ ಡಾಲರ್ ಪ್ಯಾಕೇಜ್ ಅನ್ನು ಭಾರತ ತಿರಸ್ಕರಿಸಿದೆ. ಈ ಮೂಲಕ ಕಡಿಮೆ ಮೊತ್ತ ಮತ್ತು ತುಂಬಾ ವಿಳಂಬವಾಗಿದೆ ಎಂದು ಹೇಳಿದೆ.
ಭಾರತದ ಪರವಾಗಿ ಹೇಳಿಕೆ ನೀಡಿದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಲಹೆಗಾರ್ತಿ ಚಾಂದಿನಿ ರೈನಾ, ಒಪ್ಪಂದವನ್ನು ಅಂಗೀಕರಿಸುವ ಮೊದಲು ಮಾತನಾಡಲು ಅವಕಾಶವಿರಲಿಲ್ಲ. 300 ಬಿಲಿಯನ್ ಡಾಲರ್ ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪೂರೈಸುವುದಿಲ್ಲ' ಎಂದಿದ್ದಾರೆ.
'ಈ ವಿಚಾರದಲ್ಲಿ ನಾವು ಅತೃಪ್ತಿ ಹೊಂದಿದ್ದೇವೆ, ಅಲ್ಲದೆ ಒಪ್ಪಂದದ ಪ್ರಕ್ರಿಯೆಯಲ್ಲಿ ನಿರಾಶೆಗೊಂಡಿದ್ದೇವೆ, ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳಲು ವಿರೋಧಿಸುತ್ತೇವೆ' ಎಂದರು.
ಭಾರತ ನಿರ್ಧಾರವನ್ನು ನೈಜೀರಿಯಾ, ಮಲಾವಿ ಮತ್ತು ಬೊಲಿವಿಯಾ ರಾಷ್ಟ್ರಗಳು ಬೆಂಬಲಿಸಿವೆ. ಹಣಕಾಸು ನಿಧಿಗೆ ನೀಡುತ್ತಿರುವ ಹಣ ಮೊತ್ತವನ್ನು 'ತಮಾಷೆ' ಎಂದು ನೈಜೀರಿಯಾ ಪ್ರತಿಕ್ರಿಯಿಸಿದೆ.