ಕಾಸರಗೋಡು: ಮಂಗಳೂರಿನಿಂದ ತಿರುವನಂತಪುರಕ್ಕೆ ಹೋಗುವ ವಂದೇ ಭಾರತ್ ಎಕ್ಸ್‍ಪ್ರೆಸ್‍ನಲ್ಲಿ ಆಂಬ್ಯುಲೆನ್ಸ್ ಕೋಚ್ ಅಳವಡಿಕೆಗೆ ಅನುಮತಿ ನೀಡಬೇಕು ಎಂದು ರೈಲ್ವೆ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.
ಮುಖ್ಯ ರೈಲು ನಿಲ್ದನಗಳಾದ ಕಾಸರಗೋಡು, ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ಕೋಯಿಕ್ಕೋಡು ಸೇರಿದಂತೆ ಮಲಬಾರ್ ಪ್ರದೇಶದಿಂದ ನೂರಾರು ರೋಗಿಗಳು ುನ್ನತ ಚಿಕಿತ್ಸೆಗಾಗಿ ತಿರುವನಂತಪುರದ ಪ್ರಾದೇಶಿಕ ಕ್ಯಾನ್ಸರ್ ಸೆಂಟರ್(ಆರ್‍ಸಿಸಿ) ಮತ್ತು ಶ್ರೀ ಚಿತ್ರಾ ಮುಂತಾದ ಆಸ್ಪತ್ರೆಗಳಿಗೆ ಪ್ರತಿನಿತ್ಯ ಭೇಟಿ ನೀಡುತ್ತಿದ್ದಾರೆ. ಇದರ ಜತೆಗೆ ತಸಿನೊಳಗೆಚಿಕಿತ್ಸೆ ಪಡೆಯಬೇಕಾದ ರೋಗಿಗಳನ್ನು ರಸ್ತೆ ಮಾರ್ಗವಾಗಿ ಸಾಗಿಸಬೇಕಾಗುತ್ತಿರುವುದರಿಂದ ಇದಕ್ಕೆ ಹೆಚ್ಚಿನ ಕಾಲಾವಕಾಶ ತಗಲುತ್ತಿದೆ. ಇದರಿಂದ ಬಹುತೇಕ ಸಂದರ್ಭಗಳಲ್ಲಿ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗುತ್ತಿದೆ.
ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಂದೇಭಾರತ್ ರೈಲಿನಲ್ಲಿ ಆಂಬ್ಯುಲೆನ್ಸ್ ಕೋಚ್ ಅಳವಡಿಸುವಂತೆ ಕಾಞಂಗಾಟ್‍ನಲ್ಲಿ ನಡೆದ ರೈಲ್ವೇ ಸಂರಕ್ಷಣಾ ವೇದಿಕೆ ಸಮಿತಿ ಸಂಬಂಧಪಟ್ಟವರನ್ನು ಒತ್ತಾಯಿಸಿದೆ. ಮಾನವ ಹಕ್ಕುಗಳ ಹೋರಾಟಗಾರ ಕೂಕಲ್ ಬಾಲಕೃಷ್ಣನ್ ಉದ್ಘಾಟಿದರು. ಸಂಯೋಜಕ ಸಿ.ಕೆ.ನಾಸರ್ ಅಧ್ಯಕ್ಷತೆ ವಹಿಸಿದ್ದರು. ರೈಲ್ವೆ ಪ್ರಯಾಣ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮವನ್ನು ನಡೆಸಲು ಸಭೆ ನಿರ್ಧರಿಸಿತು. ರೈಲ್ವೆ ಪೆÇ್ರಟೆಕ್ಷನ್ ಫೆÇೀರಂ ಕಳೆದ ಒಂದು ವರ್ಷದಿಂದ ವಾಟ್ಸಾಪ್ ಗ್ರೂಪ್ ಮೂಲಕ ಕೆಲಸ ಮಾಡುತ್ತಿದೆ. ಕಾಞಂಗಾಟ್ ಸಂಯುಕ್ತ ಜಮಾತ್ ಅಧ್ಯಕ್ಷ ಪಾಲಕಿ ಸಿ. ಕುಂಞಮದ್ ಹಾಜಿ ಮುಖ್ಯ ಭಾಷಣ ಮಾಡಿದರು. ಕಾಞಂಗಾಡು ನಗರಸಭೆ ಸದಸ್ಯ ಬಾಲರಾಜ್, ಮ್ಯಾನುಯಲ್ ಕುರಿಚಿತಾನಂ, ದಿಲೀಪ್ ಮೆಡೈಲ್, ಎ. ಹಮೀದ್ ಹಾಜಿ, ಹಮೀದ್ ಕುಣಿಯ, ಎಂ ಇಬ್ರಾಹಿಂ, ಸುರೂರು ಮೊಯ್ತು ಹಾಜಿ, ಇಬ್ರಾಹಿಂ ಮೂಲಕ್ಕಡಂ, ಮುಹಮ್ಮದ್ ಜೂನಿಯರ್ ಬೆಸ್ಟೊ ಉಪಸ್ಥಿತರಿದ್ದರು. ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.