ಕಾಸರಗೋಡು: ಸಾಹಿತ್ಯಿಕ ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ (ರಿ) ಕಾಸರಗೋಡು ಇದರ ಸಹ ಸಂಸ್ಥೆ ಸ್ವರಚಿನ್ನಾರಿ ಏರ್ಪಡಿಸುವ “ರಾಗಾಲಾಪ” ರಾಗ ಸಂಯೋಜನೆಯ ಕುರಿತಾದ ಒಂದು ದಿನದ ಕಾರ್ಯಾಗಾರ ಡಿ..12 ರಂದು ಶನಿವಾರ ಬೆಳಿಗ್ಗೆ 9.30 ರಿಂದ ಸಂಜೆ 5 ರ ವರೆಗೆ ಕಾಸರಗೋಡು ಕರಂದೆಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ರಾಷ್ಟ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಇವರ ನೇತೃತ್ವದಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ವಿ ಮನೋಹರ್ ಅವರು ಹೊಸ ಹಾಡುಗಳಿಗೆ ರಾಗ ಸಂಯೋಜನೆ ಮಾಡುವುದು ಹೇಗೆ ಎಂಬ ಕುರಿತಾಗಿ ಮತ್ತು ಅದನ್ನು ಶಿಬಿರಾರ್ಥಿಗಳಿಂದ ಹಾಡಿಸಿ ಕಲಿಸುವ ಕಾರ್ಯಕ್ರಮವಾಗಿರುವುದರಿಂದ ಕಾಸರಗೋಡಿನ ಕವಿಗಳಿಂದ ಹಾಡುಗಳನ್ನು ಆಹ್ವಾನಿಸಲಾಗಿದೆ.
1) ಹಾಡುಗಳು 2 ಚರಣ ದಾಟಬಾರದು (12 ಸಾಲುಗಳು ), 2) ಆಯ್ದ ಉತ್ತಮ 2 ಭಾವಗೀತೆಗಳಿಗೆ ಪ್ರಾಧಾನ್ಯತೆ ನೀಡಲಾಗುವುದು, 3) ಈ ಮೊದಲು ರಚಿಸಿ ಪ್ರಕಟಿಸಿದ ಹಾಡುಗಳನ್ನು ಸ್ವೀಕರಿಸಲಾಗುವುದಿಲ್ಲ. ಖಡ್ಡಾಯವಾಗಿ ಹೊಸ ರಚನೆ ಆಗಿರಬೇಕು, 4) ಹಾಡುಗಳನ್ನು ನ. 20 ಬುಧವಾರದ ಒಳಗಾಗಿ ಈ ಕೆಳಗೆ ನೀಡಿರುವ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು ಎಂದು ಸೂಚಿಸಲಾಗಿದೆ. ಸಂಘಟಕರ ತೀರ್ಮಾನ ಅಂತಿಮವಾಗಿರುತ್ತದೆ. ಹಾಡುಗಳನ್ನು ಕಳುಹಿಸಬೇಕಾದ ಸಂಖ್ಯೆ : +91 6282 731 359- ಶ್ರೀಕೃಷ್ಣಯ್ಯ ಅನಂತಪುರ (ಖ್ಯಾತ ಕವಿಗಳು), ಗೌರವಾಧ್ಯಕ್ಷರು- ಸ್ವರಚಿನ್ನಾರಿ ಕಾಸರಗೋಡು.