ಕೊಚ್ಚಿ: ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳನ್ನೊಳಗೊಂಡ ವಾಟ್ಸಾಪ್ ಗುಂಪಿನ ವಿರುದ್ಧ ಕೇರಳ ಹೈಕೋರ್ಟ್ ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಲಾಯರ್ಸ್ ನ್ಯೂಸ್ ನೆಟ್‍ವರ್ಕ್ ಎಂಬ ವಾಟ್ಸಾಪ್ ಗುಂಪಿನ ವಿರುದ್ಧ ದೂರು ದಾಖಲಾಗಿದೆ.
ವಕೀಲರ ಸಂಘದ ವಾರ್ಷಿಕ ಆಚರಣೆ ವೇಳೆ ಉಂಟಾಗಿರುವ ಸಮಸ್ಯೆಗಳ ಹಿಂದೆ ವಾಟ್ಸ್ಆ್ಯಪ್ ಗ್ರೂಪ್‍ಗೆ ಸಂಬಂಧಿಸಿದವರ ಕೈವಾಡವಿದೆ ಎಂದು ವಕೀಲರ ಸಂಘವು ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದೆ.
ಹೈಕೋರ್ಟ್ ವಕೀಲರ ಸಂಘದ ಪತ್ರದ ಪ್ರಕಾರ, ಈ ವಿಷಯವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗಿದೆ. ಸರ್ಕಾರಿ ವಕೀಲರು ಮತ್ತು ಪತ್ರಕರ್ತರ ವಿಭಾಗವನ್ನು ಒಳಗೊಂಡಿರುವ ವಾಟ್ಸಾಪ್ ಗ್ರೂಪ್‍ನಲ್ಲಿ ನ್ಯಾಯಾಧೀಶರನ್ನು ಹೊಂದಿರುವುದು ಅನುಚಿತವಾಗಿದೆ ಎಂದು ವಕೀಲರ ಸಂಘವು ವಾದಿಸಿದೆ.