ನಿಮ್ಮ ಫೋನ್ ಲಾಕ್ ಆಗಿದ್ದರೆ ಅದನ್ನು ಅನ್ಲಾಕ್ ಮಾಡುವುದು ಹೇಗೆ?. ನಿಮ್ಮ ಲಾಕ್ ಆಗಿರುವ ಫೋನ್ ಅನ್ನು ನೀವೇ ಸುಲಭವಾಗಿ ಅನ್‌ಲಾಕ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚಿನ ಸಮಯ ಕೂಡ ವ್ಯರ್ಥ ಮಾಡಬೇಕಾಗಿಲ್ಲ. ಕೆಳಗೆ ನೀಡಲಾದ ಕೆಲವು ಟ್ರಿಕ್ಗಳನ್ನು ಅನುಸರಿಸಿ.
ಸಾಮಾನ್ಯವಾಗಿ ನಾವು ಸ್ನೇಹಿತರು ಅಥವಾ ಕುಟುಂಬದ ಭಯದಿಂದ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಾಸ್ಕೋಡ್ ಅನ್ನು ಬದಲಾಯಿಸುತ್ತಲೇ ಇರುತ್ತೇವೆ. ಹೀಗೆ ಹೊಸ ಪಾಸ್ಕೋಡ್ ಹಾಕಿದಾಗ ಆರಂಭದಲ್ಲಿ ಆ ಪಾಸ್ವರ್ಡ್ ನೆನಪು ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಈ ಕಾರಣದಿಂದಾಗಿ ಪಾಸ್‌ಕೋಡ್ ಅನ್ನು ಮರೆತುಬಿಡುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಅನ್ನು ಅನ್ಲಾಕ್ ಮಾಡುವುದು ಹೇಗೆ?. ನಿಮ್ಮ ಲಾಕ್ ಆಗಿರುವ ಫೋನ್ ಅನ್ನು ನೀವೇ ಸುಲಭವಾಗಿ ಅನ್‌ಲಾಕ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚಿನ ಸಮಯ ಕೂಡ ವ್ಯರ್ಥ ಮಾಡಬೇಕಾಗಿಲ್ಲ. ಕೆಳಗೆ ನೀಡಲಾದ ಕೆಲವು ಟ್ರಿಕ್ಗಳನ್ನು ಅನುಸರಿಸಿ.
ಈ ಟ್ರಿಕ್ ನಿಮಗೆ ಸಹಾಯ ಮಾಡುತ್ತದೆ:
ಆದರೆ ಇದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಬಳಸುವ ಮೊದಲು, ಅದರ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಓದಿ ಮತ್ತು ಪರಿಶೀಲಿಸಿ, ಹಾಗೆಯೆ ಗೂಗಲ್ನಲ್ಲಿ ವಿಮರ್ಶೆ-ರೇಟಿಂಗ್ ಅನ್ನು ಎಚ್ಚರಿಕೆಯಿಂದ ಗಮನಿಸಿ.
ಫೈಂಡ್ ಮೈ ಐಫೋನ್ ಫೀಚರ್:
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೈಂಡ್ ಮೈ ಐಫೋನ್ ಫೀಚರ್ ಅನ್ನು ಸಕ್ರಿಯಗೊಳಿಸಿದ್ದರೆ, ನೀವು ಅದನ್ನು ರಿಮೋಟ್‌ನಲ್ಲಿ ಐಫೋನ್ ಡೇಟಾವನ್ನು ಅಳಿಸಲು ಮತ್ತು ಫೋನ್ ಸಂಪೂರ್ಣ ರಿಸ್ಟೋರ್ ಮಾಡಲು ಬಳಸಬಹುದು. ಈ ಪ್ರಕ್ರಿಯೆಯಿಂದ ನಿಮ್ಮ ಪಾಸ್‌ಕೋಡ್ ಅನ್ನು ಸಹ ತೆಗೆದುಹಾಕಲಾಗುತ್ತದೆ. ಆಗ ಇದರಲ್ಲಿರುವ ಎಲ್ಲ ಡೇಟಾ ಡಿಲೀಟ್ ಆಗುತ್ತದೆ. ನಂತರ ನಿಮ್ಮ ಐಫೋನ್ ಹೊಸದರಂತೆ ಆಗುತ್ತದೆ. ಫೋನ್ ಕದ್ದಿದ್ದರೂ ಸಹ ಈ ವಿಧಾನವು ಉಪಯುಕ್ತವಾಗಿದೆ.
ಕಂಪ್ಯೂಟರ್ ಬಳಸಿ ಪಾಸ್‌ಕೋಡ್ ತೆಗೆಯಿರಿ:
ನೀವು ಮ್ಯಾಕ್ ಅಥವಾ ವಿಂಡೋಸ್ ಕಂಪ್ಯೂಟರ್ ಬಳಸಿ ನಿಮ್ಮ ಐಫೋನ್ ಅನ್ನು ರಿಸ್ಟೋರ್ ಮಾಡಬಹುದು. ಇದಕ್ಕಾಗಿ, iTunes ಗೆ ಹೋಗಿ, ಇಲ್ಲಿ ನಿಮ್ಮ ಐಫೋನ್ ಅನ್ನು ರಿಕವರಿ ಮೋಡ್ನಲ್ಲಿ ಇರಿಸಿ. ಇದರ ನಂತರ iTunes ನಲ್ಲಿ ರಿಸ್ಟೋರ್ ಆಯ್ಕೆಯನ್ನು ಆರಿಸಿ. ಇದು ಐಫೋನ್ ಅನ್ನು ರಿಸೆಟ್ ಮಾಡುತ್ತದೆ, ಬಳಿಕ ನೀವು ಹೊಸ ಪಾಸ್ಕೋಡ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ.
ಈ ಎಲ್ಲಾ ಪ್ರಕ್ರಿಯೆಯನ್ನು ಮಾಡುವ ಮೊದಲು, ನೀವು ಯಾವಾಗಲೂ ನಿಮ್ಮ ಬ್ಯಾಕಪ್ ಅನ್ನು ತೆಗೆದುಕೊಳ್ಳುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ, ನೀವು ನಿಮ್ಮ ಮೊಬೈಲ್ನಲ್ಲಿರುವ ಎಲ್ಲ ಡೇಟಾವನ್ನು ಕಳೆದುಕೊಳ್ಳಬಹುದು.