HEALTH TIPS

ಪ್ಯಾಲೆಸ್ಟೀನ್ ಬಂಡುಕೋರರ ಕುಟುಂಬ ಸದಸ್ಯರ ಗಡಿಪಾರು: ಮಸೂದೆ ಅಂಗೀಕರಿಸಿದ ಇಸ್ರೇಲ್‌

 ಜೆರುಸಲೇಂ: ತನ್ನ ಮೇಲೆ ದಾಳಿ ಮಾಡಿದ ಪ್ಯಾಲೆಸ್ಟೀನ್‌ ಬಂಡುಕೋರರ ಕುಟುಂಬ ಸದಸ್ಯರನ್ನು ಗಡೀಪಾರು ಮಾಡಲು ನಿರ್ಧರಿಸಿರುವ ಇಸ್ರೇಲ್, ಇದಕ್ಕಾಗಿ ಗುರುವಾರ ನೂತನ ಮಸೂದೆಯನ್ನು ಅಂಗೀಕರಿಸಿದೆ.

ಪ್ಯಾಲೆಸ್ಟೀನ್‌ ಬಂಡುಕೋರರ ಹಲವು ಕುಟುಂಬಗಳ ಸದಸ್ಯರು ಇಸ್ರೇಲ್‌ನಲ್ಲಿ ವಾಸವಿದ್ದಾರೆ.

ಈ ಪೈಕಿ ಇಸ್ರೇಲ್‌ನ ಪೌರತ್ವವನ್ನು ಪಡೆದುಕೊಂಡಿರುವವರೂ ಇದ್ದಾರೆ.

ಇವರನ್ನು 7 ರಿಂದ 20 ವರ್ಷಗಳ ಅವಧಿಗೆ ಗಾಜಾ ಪಟ್ಟಿ ಅಥವಾ ಇತರ ಪ್ರದೇಶಗಳಿಗೆ ಗಡೀಪಾರು ಮಾಡಲು ನೂತನ ಮಸೂದೆಯು ಅವಕಾಶ ನೀಡುತ್ತದೆ. ಇಸ್ರೇಲ್‌ನಲ್ಲಿರುವ ಪ್ಯಾಲೆಸ್ಟೀನ್‌ ಸದಸ್ಯರು ಹಾಗೂ ಪೂರ್ವ ಜೆರುಸಲೇಂ ಪ್ರದೇಶದಲ್ಲಿರುವ ಜನರಿಗೆ ಈ ನೀತಿ ಅನ್ವಯವಾಗಲಿದೆ.

ಇಸ್ರೇಲ್‌ ವಶದಲ್ಲಿರುವ ವೆಸ್ಟ್‌ ಬ್ಯಾಂಕ್‌ನಲ್ಲಿರುವ ಜನರಿಗೆ ಈ ನೀತಿ ಅನ್ವಯವಾಗುತ್ತದೆಯೇ, ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಲಿಕುಡ್‌ ಪಕ್ಷ ಹಾಗೂ ಅದರ ಮಿತ್ರಪಕ್ಷಗಳ ಸದಸ್ಯರ ಬೆಂಬಲದೊಂದಿಗೆ 61-41 ಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಯಿತು.

ಕಾರಣವೇನು?:

ಪ್ಯಾಲೆಸ್ಟೀನ್‌ ದಾಳಿಕೋರರ ಕುಟುಂಬ ಸದಸ್ಯರಾಗಿರುವ ಇವರಿಗೆ ಇಸ್ರೇಲ್‌ ಮೇಲಿನ ದಾಳಿ ಬಗ್ಗೆ ಮೊದಲೇ ತಿಳಿದಿರುತ್ತದೆ. ಭಯೋತ್ಪಾದನೆಯಂತಹ ಕೃತ್ಯಕ್ಕೆ ಇವರು ಬೆಂಬಲ ನೀಡಿದ್ದಾರೆ ಎಂಬ ಕಾರಣದಿಂದ ಗಡೀಪಾರು ಮಾಡಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries