ಕಾಸರಗೋಡು: ಸಾರ್ವಜನಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 'ತೆಲಿಮಾ ಯೋಜನೆ'ಯನ್ವಯ ನವೆಂಬರ್ 15 ರಿಂದ ಡಿಸೆಂಬರ್ 15 ರವರೆಗೆ ಪಡಿತರ ಚೀಟಿಗಳಲ್ಲಿನ ತಪ್ಪು ಸರಿಪಡಿಸಲು ಅವಕಾಶ ಕಲ್ಪಿಸಿದೆ.
ಈ ದಿನಗಳಲ್ಲಿ ಪಡಿತರ ಚೀಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಕಾರ್ಡ್‍ದಾರರಿಗೆ ಅವಕಾಶ ನೀಡುವುದರ ಜತೆಗೆ ಅನಧಿಕೃತವಾಗಿ ಆದ್ಯತಾಕಾರ್ಡು ಹೊಂದಿರುವವರ ಬಗ್ಗೆ ಮಾಹಿತಿ ಜೊತೆಗೆ ಪಡಿತರ ಡಿಪೆÇೀಗಳಲ್ಲಿನ ಆಹಾರ ಧಾನ್ಯಗಳ ಗುಣಮಟ್ಟ, ಪರವಾನಗಿದಾರರು ಯಾ ಮಾರಾಟಗಾರರ ನಡವಳಿಕೆಯ ಬಗ್ಗೆ ದೂರುಗಳ ಬಗ್ಗೆ, ಪಡಿತರ ಡಿಪೆÇೀಗಳ ನಿರ್ವಹಣೆಯ ಬಗ್ಗೆ ಪ್ರತಿಕ್ರಿಯೆಗಳನ್ನೂ ನೀಡಬಹುದಾಗಿದೆ. ಪಡಿತರ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಹಾಗೂ ಗ್ರಾಹಕರಿಂದ ಸಲಹೆ, ಸೂಚನೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ತಿರಸ್ಕರಿಸಿದ ಇ-ಕೆವೈಸಿ ಹೆಸರುಗಳ ತಿದ್ದುಪಡಿಗಾಗಿ ಅರ್ಜಿಗಳನ್ನು ಸಹ ಸ್ವೀಕರಿಸಲಾಗುತ್ತದೆ.ಯೋಜನೆಯನ್ವಯ ಸಾರ್ವಜನಿಕರ ದೂರುಗಳು, ಅರ್ಜಿಗಳು ಮತ್ತು ಅಭಿಪ್ರಾಯಗಳನ್ನು ಫೆÇೀನ್ ಸಂಖ್ಯೆಯೊಂದಿಗೆ ಪಡಿತರ ಡಿಪೆÇೀಗಳಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಪೆಟ್ಟಿಗೆಯಲ್ಲಿ ಡಿ.15ರ ವರೆಗೆ ಸಲ್ಲಿಸಬಹುದಾಗಿದೆ.
ಮನೆ ವಿಸ್ತೀರ್ಣದಲ್ಲಿ ಬದಲಾವಣೆ, ವಾಹನಗಳ ಮಾಹಿತಿ, ಪಡಿತರ ಚೀಟಿಯಲ್ಲಿ ದಾಖಲಾದ ಆದಾಯ ಅಥವಾ ಪಡಿತರ ಚೀಟಿಯಲ್ಲಿ ಹೊಸ ಸೇರ್ಪಡೆಯನ್ನು ಯೋಜನೆಯಲ್ಲಿ ಪರಿಗಣಿಸಲಾಗುವುದಿಲ್ಲ. ಇಂತಹ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 - 255138)ಸಂಪರ್ಕಿಸುವಂತೆ ಜಿಲ್ಲಾ ಸರಬರಾಜು ಅಧಿಕಾರಿ ಪ್ರಕಟಣೆ ತಿಳಿಸಿದೆ.