ಬದಿಯಡ್ಕ: ಮಾನ್ಯ ಶ್ರೀಅಯ್ಯಪ್ಪ ಮಂದಿರದಿಂದ ಬೆಳ್ಳಿಯ ವಿಗ್ರಹವನ್ನು ಕಳವುಗೈದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪುತ್ತೂರು ಕಸಬಾ ಕೊೈಲದ ಕೆ.ಇಬ್ರಾಹಿಂ ಕಲಂದರ್ (42) ಎಂಬಾತನನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ನ.4ರಂದು ಬೆಳಗ್ಗೆ ಭಜನಾ ಮಂದಿರದಲ್ಲಿ ದರೋಡೆ ನಡೆದಿತ್ತು. ಅದೇ ದಿನ ನೆಲ್ಲಿಕಟ್ಟೆಯ ಗುರುದೇವ ಮಂದಿರ ಮತ್ತು ಪೆÇಯಿನಾಚಿ ಅಯ್ಯಪ್ಪ ದೇವಸ್ಥಾನದಲ್ಲೂ ಕಳವು ನಡೆದಿತ್ತು. ಈ ತಂಡದಲ್ಲಿ ಇಬ್ರಾಹಿಂ ಕಲಂದರ್ ಇದ್ದ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ. ಕಾಸರಗೋಡು ಪೆÇಲೀಸ್ ಉಪವಿಭಾಗದ ಎಡನೀರು ವಿಷ್ಣುಮಂಗಲ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಮೊದಲ ದೇವಸ್ಥಾನದ ದರೋಡೆ ನಡೆದಿತ್ತು. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಮತ್ತೆ ಮೂರೆಡೆ ಕಳವು ನಡೆದಿತ್ತು. ಬಳಿಕ ಕರ್ನಾಟಕದ ಬಂಟ್ವಾಳ ಸೇರಿದಂತೆ ವಿವಿಧೆಡೆ ಎರಡು ಕಳವು ಪ್ರಕರಣ ನಡೆದಿತ್ತು.
ಪೋಲೀಸರ ತನಿಖೆ ಮುಂದುವರಿದಿರುವಾಗಲೇ ಕಾಸರಗೋಡಿನ ಹಣಕಾಸು ಸಂಸ್ಥೆಯೊಂದರಲ್ಲಿ ದರೋಡೆಗೆ ತಂಡವೊಂದು ಬರುತ್ತಿರುವ ಬಗ್ಗೆ ಪೋಲೀಸರಿಗೆ ಸುಳಿವು ಸಿಕ್ಕಿತ್ತು. ಇದರ ಬೆನ್ನಲ್ಲೇ ಸ್ಥಳೀಯರ ನೆರವಿನಿಂದ ನಿಗಾವಹಿಸಿ ಭಾನುವಾರ ಬೆಳಗ್ಗೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ತೆರಳುತ್ತಿದ್ದ ತಂಡವೊಂದು ದೈಗೋಳಿಯಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದಿದೆ. ಮಂಗಳೂರು, ತುಮಕೂರಿನ ಕೋಡಿಉಳ್ಳಾಲದ ಫೈಸಲ್ ಮತ್ತು ಮೊಗಳ್ಳಿಯ ಸೈಯದ್ ಅಮಾನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಾಲ್ವರು ಪರಾರಿಯಾಗಿದ್ದರು.
ಈ ಪೈಕಿ ಪರಾರಿಯಾಗಿದ್ದರಲ್ಲಿ ಒಬ್ಬರು ಇಬ್ರಾಹಿಂ ಕಲಂದರ್ ಆಗಿದ್ದು, ಆತನನ್ನು ಬುಧವಾರ ಬಂಧಿಸಲಾಗಿದೆ ಎಂದು ಪೆÇಲೀಸ್ ಮೂಲಗಳು ಸೂಚಿಸಿವೆ. ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ. ಗುಂಪು ಪ್ರಯಾಣಿಸುತ್ತಿದ್ದ ಕಾರಿನಿಂದ ಗ್ಯಾಸ್ ಕಟ್ಟರ್ ಸೇರಿದಂತೆ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ದೈಗೋಳಿಯಿಂದ ಪರಾರಿಯಾದ ತಂಡವು ಫೆಬ್ರವರಿ 8 ರಂದು ಅಡ್ಯನಡ್ಕದ ಕರ್ಣಾಟಕ ಬ್ಯಾಂಕ್‍ನ ದರೋಡೆ ಮಾಡಿತ್ತು. ಅಂದು ಬಂಧಿತರಾಗಿ ಬಿಡುಗಡೆಗೊಂಡ ತಂಡವೇ ಹೊಸ ದರೋಡೆಗಳಿಗೆ ಇಳಿದಿದೆ ಎಂದು ಪೋಲೀಸರು ಮಾಹಿತಿ ನೀಡಿರುವರು.