HEALTH TIPS

ದೇವರಿಗೆ ಕೊಡುವುದು ದಾನವಲ್ಲ ಅರ್ಪಣೆ: ಎಡಕ್ಕಾನ ಮಹಾಬಲೇಶ್ವರ ಭಟ್

ಬದಿಯಡ್ಕ: ದುಡಿದು ಸಂಪಾದಿಸಿದ ಆದಾಯದಲ್ಲಿ ಒಂದಂಶವನ್ನು ಸಮಾಜಕ್ಕೆ ಹಿಂತಿರುಗಿಸುವುದರಿಂದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ. ದೇವಾಲಯಗಳಿಗೆ ನಾವು ನೀಡುವ ತನು ಮನ ದಾನಗಳು ಅರ್ಪಣೆಯಾಗಬೇಕು, ಅವುಗಳು ದೇಣಿಗೆ ಎನಿಸಬಾರದು. ನಾಡಿನ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕಾಗಿದೆ. ಆಧುನಿಕ ಯುಗದಲ್ಲಿ ಭಕ್ತರು ಇದನ್ನು ಬಯಸುತ್ತಾರೆ. ಇಲ್ಲಿ ಆರಂಭಗೊಂಡ `ಶಿವಾರ್ಪಣಂ' ಯೋಜನೆಯು ಬ್ರಹ್ಮಕಲಶೋತ್ಸವಕ್ಕೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ನಡೆಯಲಿ ಎಂದು ಉದ್ಯಮಿ, ಸಮಾಜ ಪ್ರೇರಕ ಎಡಕ್ಕಾನ ಮಹಾಬಲೇಶ್ವರ ಭಟ್ ಹೇಳಿದರು. 

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ 25 ಹಿನ್ನೆಲೆಯಲ್ಲಿ ಶಿವಾರ್ಪಣಂ ದ್ವಿತೀಯ ಶ್ರಮದಾನ ಸೇವೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಂಕೇತಿಕವಾಗಿ ದೇವಾಲಯದ ಹಳೆಯ ಹಂಚಿನ ಮೇಲೆ ನೀರಿನ ಸಿಂಚನವನ್ನು ಮಾಡಿ ಶ್ರಮದಾನಿಗಳನ್ನು ಹುರಿದುಂಬಿಸಿದರು. ಸಭಾ ವೇದಿಕೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಹಾಗು ಕಾರ್ಯದರ್ಶಿ ಡಾ. ಪ್ರಕಾಶ್ ವೈ.ಎಚ್. ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳಾದ ಡಾ.ವೈ.ವಿ.ಕೃಷ್ಣಮೂರ್ತೀ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು.  ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ವಂದಿಸಿದರು.  ಊರಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಿವಾರ್ಪಣಂ ಶ್ರಮದಾನ ಸೇವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries