ಪತ್ತನಂತಿಟ್ಟ: ವರ್ಚುವಲ್ ಕ್ಯೂ ವ್ಯವಸ್ಥೆ ಮೂಲಕ ಶಬರಿಮಲೆ ಯಾತ್ರಾರ್ಥಿಗಳಿಗೆ ಮೊದಲ ದಿನವೇ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ. ಶ್ರೀದೇವರ ದರ್ಶನಕ್ಕಾಗಿ ವರ್ಚುವಲ್ ಕ್ಯೂ ಮೂಲಕ ಶುಕ್ರವಾರ 30,000 ಜನರು ಬುಕ್ ಮಾಡಿದ್ದು, ಈ ಪೈಕಿ 26,942 ಮಂದಿ ದರ್ಶನ ಪಡೆದಿದ್ದಾರೆ. ಸ್ಪಾಟ್ ಬುಕ್ಕಿಂಗ್ ಮೂಲಕ 1872 ಭಕ್ತರು ಆಗಮಿಸಿದ್ದರು. ಶುಕ್ರವಾರ ಸಂಜೆ ಗರ್ಭಗುಡಿ ಬಾಗಿಲು ತೆರೆದ ಬಳಿಕ ಗರ್ಭಗುಡಿ ಬಾಗಿಲು ಮುಚ್ಚುವ ತನಕ ವಿಐಪಿಗಳು ಸೇರಿದಂತೆ ಒಟ್ಟು 30,687 ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಶಬರಿಮಲೆ ತೀರ್ಥಾಟನೆಗೆ ಸಂಬಂಧಿಸಿದಂತೆ ಸನ್ನಿಧಾನದ ವಿವಿಧ ಇಲಾಖೆಗಳ ಮುಖ್ಯಸ್ಥರ ಪರಿಶೀಲನಾ ಸಭೆಯ ನಂತರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ತೀರ್ಥಾಟನೆಗೆ ಆಗಮಿಸುವ ಭಕ್ತಾದಿಗಳಿಗೆ ಶಬರಿಮಲೆಯಲ್ಲಿ ಯಾವುದೇ ಕೊರತೆಯಾಗದ ರೀತಿಯಲ್ಲಿ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ. ಸುಗಮವಾದ ತೀರ್ಥಾಟನೆ ಗುರಿಯಾಗಿದೆ ಎಂದು ನುಡಿದರು. ವರ್ಚುವಲ್ ಕ್ಯೂ ಮೂಲಕ ದಿನಕ್ಕೆ 70,000 ಜನರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಘಿದೆ. ವರ್ಚುವಲ್ ಕ್ಯೂ ವಿನ ಸಂಖ್ಯೆ ಏರಿಕೆಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿದ ನಂತರವೇ ನಿರ್ಧಾರ ಕೈಗೊಳ್ಳಲಾಗುವುದು. ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಸರ್ಕಾರ ಹಾಗೂ ದೇವಸ್ವಂ ಮಂಡಳಿ ಕೈಗೊಂಡಿರುವ ಸಿದ್ಧತೆಗಳು ಪರಿಣಾಮಕಾರಿಯಾಗಿದ್ದು, ಪೆÇಲೀಸರ ಸೂಕ್ತ ಮಧ್ಯಸ್ಥಿಕೆಯಿಂದ ಪ್ರತಿ ನಿಮಿಷಕ್ಕೆ ಸರಾಸರಿ 80 ಭಕ್ತರು 18ನೇ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿದ್ದು, ಇದರಿಂದ ಮಾರ್ಗದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಕಡಿಮೆಯಾಗಿದೆ.
ಅಪ್ಪ, ಅರವಣ ಪಾಯಸ ದಾಸ್ತಾನು:
ಈ ಬಾರಿ ಅಪ್ಪ, ಅರವಣ ಪ್ರಸಾದ ವಿತರಣೆಗೆ ಯಾವುದೇ ಅಡ್ಡಿಯಾಗದು. 40 ಲಕ್ಷ ಟಿನ್ ಅರವಣ ಪಾಯಸ ಡಬ್ಬಗಳನ್ನು ಬಫರ್ ಸ್ಟಾಕ್ ಆಗಿ ಇರಿಸಲಾಗಿದೆ. ಪ್ರಯಾಣದ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವಿಸ್ತೃತ ವ್ಯವಸ್ಥೆ ಮಾಡಲಾಗಿದೆ. ಸಣ್ಣ ವಾಹನಗಳಿಗೆ ಪಂಪಾದಲ್ಲಿ ಸಾಧ್ಯವಾದಷ್ಟು ಪಾಕಿರ್ಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದೂ ಸಚಿವರು ತಿಳಿಸಿದರು.