ಮಲಪ್ಪುರಂ: ಹಬ್ರಿ ಸೀತಂಬೈಲಿನಲ್ಲಿ ನಕ್ಸಲ್ ನಿಗ್ರಹ ದಳದ ಕಾಯಾಚರಣೆ ಮಧ್ಯೆ ಹತನಾಗಿರುವ ನಕ್ಸಲ್ ವಿಕ್ರಂ ಗೌಡ 2016ರಲ್ಲಿ ಮಲಪ್ಪುರಂ ಜಿಲ್ಲೆಯ ನಿಲಂಬೂರಿನಲ್ಲಿ ನಕ್ಸಲ್‍ನಿಗ್ರಹ ಪಡೆ ನಡೆಸಿದ್ದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡಿದ್ದನು. ಮಾವೋವಾದಿ ಕಮಾಂಡರ್ ಆಗಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ವಿಕ್ರಂ ಗೌಡನಿಗಾಗಿ ಕಳೆದ 20ವರ್ಷಗಳಿಂದಲೂ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ನಕ್ಸಲ್ ಮುಖಂಡ ಮೊಯ್ದು ಎಂಬಾತನನ್ನು ಆಲಪ್ಪುಳದಿಂದ ಇತ್ತೀಚೆಗೆ ಕೇರಳ ಪೊಲೀಸರು ಬಂಧಿಸಿದ್ದು, ಈತನ ಸಹಚರರ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಳ್ಳುತ್ತಿದ್ದಂತೆ ಮಾವೋವಾದಿ ಕಮಾಂಡರ್ ಆಗಿದ್ದ ವಿಕ್ರಂ ಗೌಡ, ಜಿಷಾ, ಜಯಣ್ಣ, ಮುಂಡುಗಾರು ಲತಾ, ವನಜಾಕ್ಷಿ ಹಾಗೂ ಸುಂದರಿ ಎಂಬವರು ಕೇರಳದಿಂದ ಪರರಿಯಾಗಿ ಕರ್ನಾಟಕದ ದಟ್ಟಾರಣ್ಯ ಸಏರಿಕೊಂಡು ಅಲ್ಲಿ ತಮ್ಮ ನಕ್ಸಲ್ ಚಟುವಟಿಕೆ ಮುಂದುವರಿಸಿದ್ದರು.
ಮಿಲಿಟಿರಿ ಓಪರೇಶನ್ ತಜ್ಞನಾಗಿದ್ದ ವಿಕ್ರಂ ಗೌಡ ದಕ್ಷಿಣ ಭಾರತದ ಪ್ರಭಾವಿ ನಕ್ಸಲ್ ನೇತಾರನಾಗಿ ಹೆಸರುಗಳಿಸಿದ್ದನು. ನಕ್ಸಲ್ ನಿಗ್ರಹ ದಳ ತಂಡರ್ ಬೋಲ್ಟ್ 2016ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈತ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದನು.