ಕೊಚ್ಚಿ: ಲಂಚ ಪಡೆಯುತ್ತಿದ್ದ ಎರ್ನಾಕುಳಂ ಸಹಾಯಕ ಕಾರ್ಮಿಕ ಆಯುಕ್ತರನ್ನು ಬಂಧಿಸಲಾಗಿದೆ. . ಉತ್ತರ ಪ್ರದೇಶ ಮೂಲದ ಅಜಿತ್ ಕುಮಾರ್ ಬಂಧಿತ ಆರೋಪಿ. ಬಿಪಿಸಿಎಲ್ ಕಂಪನಿಯಲ್ಲಿ ಕಾರ್ಮಿಕರ ಕಾರ್ಡ್(ಲೇಬರ್ ಕಾರ್ಡ್) ಗೆ ಸಂಬಂಧಿಸಿದಂತೆ 20,000 ರೂ.ಲಂಚಪಡೆದಿರುವುದಾಗಿ ತಿಳಿದುಬಂದಿದೆ. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಅಧಿಕಾರಿಯ ಮನೆಯಲ್ಲಿ ಎರಡೂವರೆ ಲಕ್ಷ ರೂಪಾಯಿ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.