ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, 'ನಾನು ಕೆಲಸದ ವೇಳಾಪಟ್ಟಿಗೆ ಅನುಗುಣವಾಗಿ ಸಮಯ ಸಿಕ್ಕಾಗ ಸಾಧ್ಯವಾದಷ್ಟು ಕ್ರಿಕೆಟ್ ನೋಡಲು ಬಯಸುತ್ತೇನೆ. ಅದರಲ್ಲೂ ವಿಶೇಷವಾಗಿ ಭಾರತ ತಂಡದ ಆಟವನ್ನು ನೋಡಲು ಪ್ರಯತ್ನಿಸುತ್ತೇನೆ' ಎಂದು ಹೇಳಿದ್ದಾರೆ.
'ನನ್ನ ನೆಚ್ಚಿನ ಆಟ ಕ್ರಿಕೆಟ್. ಆದರೆ, ನನಗೆ ಕ್ರಿಕೆಟ್ ಆಡಲು ಸಮಯ ಸಿಗುತ್ತಿಲ್ಲ. ಅಲ್ಲದೆ, ನನಗೂ ಸ್ವಲ್ಪ ವಯಸ್ಸಾಗಿದೆ. ಮೊಬೈಲ್‌ನಲ್ಲಿ ಪಂದ್ಯದ ಲೈವ್ ವೀಕ್ಷಿಸಲು ಇದುವರೆಗೆ ಸಾಧ್ಯವಾಗಿಲ್ಲ. ಆದರೆ, ಐದರಿಂದ ಏಳು ನಿಮಿಷಗಳ ಹೈಲೈಟ್ಸ್ ವಿಡಿಯೊಗಳನ್ನು ವೀಕ್ಷಿಸುತ್ತೇನೆ' ಎಂದಿದ್ದಾರೆ.
'ಭಾರತ ತಂಡದ ಪಂದ್ಯವಿರುವಾಗ ವಿರಾಟ್ ಕೊಹ್ಲಿ ಹೇಗೆ ಆಡಿದ್ದಾರೆ. ರವಿಚಂದ್ರನ್ ಅಶ್ವಿನ್ ಹೇಗೆ ಬೌಲಿಂಗ್ ಮಾಡಿದ್ದಾರೆ ಅಥವಾ ಬೂಮ್ರಾ ಅವರು ಚೆನ್ನಾಗಿ ಬೌಲ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಪ್ಪದೇ ನೋಡುತ್ತೇನೆ' ಎಂದು ಹೇಳಿಕೊಂಡಿದ್ದಾರೆ.
ನವೆಂಬರ್ 10ರಂದು ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಬಳಿಕ ಸುಪ್ರೀಂ ಕೋರ್ಟ್‌ನ 51ನೆಯ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಖನ್ನಾ ಅವರು 2025ರ ಮೇ 13ರವರೆಗೆ ಸಿಜೆಐ ಆಗಿರಲಿದ್ದಾರೆ.