ಬದಿಯಡ್ಕ: ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ ವಿದ್ವಾಂಸರಾದ ವೇ.ಮೂ.ಪರಮೇಶ್ವರ ಭಟ್ಟ ಪಳ್ಳತ್ತಡ್ಕ ಇವರಿಗೆ ನುಡಿನಮನ ಮತ್ತು ಶ್ರದ್ಧಾಂಜಲಿ ಸಭೆ ಪಳ್ಳತ್ತಡ್ಕ ಮುದ್ದು ಮಂದಿರದಲ್ಲಿ ಇತ್ತೀಚೆಗೆ ಜರಗಿತು. ಆಡಳಿತ ಖಂಡದ ಪ್ರಾಂತ ಜವಾಬ್ದಾರಿ ಮತ್ತು ಮಾಣಿಮಠದ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಸಂಘಟನಾ ಖಂಡದ ಶ್ರೀಸಂಯೋಜಕ ಡಾ.ವೈ.ವಿ ಕೃಷ್ಣಮೂರ್ತಿ, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಹಾಮಂಡಲ ಪ್ರಾಂತ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮಂಡಲ ಉಪಾಧ್ಯಕ್ಷ ನಾರಾಯಣ ಮೂರ್ತಿ, ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ,, ವೇ.ಮೂ ಕೇಶವ ಪ್ರಸಾದ ಕೂಟೇಲು, ಸೇಡಿಗುಮ್ಮೆ ಗೋಪಾಲಕೃಷ್ಣ ಭಟ್, ಶ್ರುತಿಸಾಗರ ಘನಪಾಠಿ ಶಂಕರನಾರಾಯಣ ಭಟ್, ಪಳ್ಳತ್ತಡ್ಕ ವಲಯ ಅಧ್ಯಕ್ಷ ಪರಮೇಶ್ವರ ಭಟ್ ಪೆರುಮುಂಡ, ಸೀತಾ, ವೇ.ಮೂ.ಗಣಪತಿ ಭಟ್ ಪಂಜರಿಕೆ, ಚಂದ್ರಶೇಖರ ಏತಡ್ಕ ಇವರು ಸಂಸ್ಮರಣಾ ಮಾತುಗಳನ್ನಾಡಿ ನುಡಿನಮನಗಳನ್ನು ಸಲ್ಲಿಸಿದರು. ಗೋವಿಂದ ಬಳ್ಳಮೂಲೆ ನಿರೂಪಿಸಿದರು. ಸುಬ್ರಹ್ಮಣ್ಯ ಭಟ್ ಕೆರೆಮೂಲೆ ವಂದಿಸಿದರು.