ಕುಂಬಳೆ: ಪರಿಸರದ ಜೀವಾಳವಾಗಿರುವ ಮುಗ್ಧ ಜೀವಜಗತ್ತಿನ ನೈಜ್ಯ ಬದುಕಿನ ಜೊತೆಗೆ ಮಾನವನ ಸ್ವಾರ್ಥ ಮನೋಭಾವದ ಚಿಂತನೆಗಳು ಪರಿಸರ ನಾಶಕ್ಕೆ ಹೇಗೆ ಕಾರಣವಾಗುತ್ತದೆ ಎಂಬ ಚಿತ್ರಣದಿಂದಿಗೆ ಪ್ರಾಣಿ ಪಕ್ಷಿಗಳ ಪ್ರತಿಮೆಯೊಂದಿಗೆ ನಾಟಕ ಮುಂದುವರಿಯುತ್ತದೆ.ಮನುಷ್ಯನು ಪ್ರಕೃತಿಯೊಂದಿಗೆ ಬೆರೆತು ಮುನ್ನಡೆಯಬೇಕು, ಇಲ್ಲಿಯ ಮರದ ಪ್ರತಿಮೆ ಒಂದು ಕಲ್ಪನೆ ಮಾತ್ರ, ಬೆಟ್ಟದ ಪ್ರತಿಮೆಯಾಗಿ ಪ್ರಕೃತಿಯ ಮೇಲಾಗುತ್ತಿರುವ ಅನಿಯಂತ್ರಿತ ಆಕ್ರಮಣದ ಸಂಕೇತವಾಗಿ ಗಮನ ಸೆಳೆವ ಸಂದೇಶದೊಂದಿಗೆ ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ವೇದಿಕೆಯಲ್ಲಿ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಕನ್ನಡ ನಾಟಕ ‘ಮರಣ ಮನೆ’ ಪ್ರಥಮ ಸ್ಥಾನದಿಂದಿಗೆ ಎ ಗ್ರೇಡ್ ಗಳಿಸಿ ಜಿಲ್ಲಾ ಹಂತದ ಸ್ಪರ್ಧೆಗೆ ಆಯ್ಕೆ ಹೊಂದಿದೆ.
ಮಕ್ಕಳ ರಂಗ ನಿರ್ದೇಶಕ ಸದಾಶಿವ ಬಾಲಮಿತ್ರ ಅವರು ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಗಳಾದ ನೂತನ್ ಎಡಕ್ಕಾನ, ಚೇತನ್ ಎಡಕ್ಕಾನ, ಪ್ರೀತಿಕಾ, ಸ್ತುತಿ ಎಂ, ಶಮಿಕ, ಪವನ್ ರಾಮ್, ತನ್ವಿತ್.ಕೆ, ಹರ್ಷಿತ್ ಬಲ್ಲಾಳ್, ಅಫ್ಲಾಹ.ಪಿ., ಸಹನಾ ಪಾತ್ರಗಳನ್ನು ನಿರ್ವಹಿಸಿದರು. ಅತ್ಯುತ್ತಮ ನಟನಾಗಿ ನೂತನ್ ಎಡಕ್ಕಾನ ಆಯ್ಕೆಗೊಂಡನು. ರಂಗಸಜ್ಜಿಕೆಯಲ್ಲಿ ಅಧ್ಯಾಪಕರಾದ ವಸಂತ ಮೂಡಂಬೈಲ್, ಪ್ರಕಾಶ್ ಕುಂಬಳೆ, ಶಿವಪ್ರಸಾದ್ ಚೆರುಗೋಳಿ, ರಾಜಕುಮಾರ್ ಕೆ, ಪ್ರಶಾಂತ ಹೊಳ್ಳ ಎನ್, ಪ್ರದೀಪ್ ಕೆ, ಅಭಿಲಾಶ್ ಪೆರ್ಲ, ಹರ್ಷಿತ್ ಐಲ್ ಸಹಕರಿಸಿದರು.