HEALTH TIPS

ಲೇಖಕಿ ಪ್ರಸನ್ನಾ ವಿ.ಚೆಕ್ಕೆಮನೆಯವರ ಎರಡು ಕೃತಿಗಳ ಲೋಕಾರ್ಪಣೆ

ಕುಂಬಳೆ: ಖ್ಯಾತ ಬರಹಗಾರ್ತಿ ಪ್ರಸನ್ನಾ ವಿ. ಚೆಕ್ಕೆಮನೆ ಅವರ ಎರಡು ಹೊಸ ಕೃತಿಗಳ ಬಿಡುಗಡೆ ಸಮಾರಂಭ ಎಡನೀರು ಸನಿಹದ ಎದುರ್ತೋಡಿನ ಸೀ ಕ್ಯೂಬ್‍ನಲ್ಲಿ ನಡೆಯಿತು.

ಪ್ರಸನ್ನಾ ಅವರ ಹನ್ನೋಂದನೇ ಕೃತಿ 'ಬಾನಂಚಿನ ಹೊಸಗಾನ' ಪುಸ್ತಕವನ್ನು  ಭಾರತೀಯ ಭೂ ಸೇನೆಯ ನಿವೃತ್ತ ಕಮಾಂಡೋ, ಎಡನೀರು ನಿವಾಸಿ ಶ್ಯಾಮರಾಜ್ ಇ.ವಿ.  ಹಾಗೂ ಹನ್ನೆರಡನೇ ಕೃತಿ 'ಪೆÇೀಗದೆ ಇರೆಲೋ ರಂಗ...' ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ   ಬಿಡುಗಡೆಗೊಳಿಸಿದರು.

ಕೃತಿ ಬಿಡುಗಡೆಗೊಳಿಸಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ  ಮಾತನಾಡಿ,  ಕಾಸರಗೋಡು ಎಂದಿಗೂ ಕನ್ನಡದ ಕಂಪನ್ನು ಹೊಂದಿರುವ ಪ್ರದೇಶವಾಗಿರುವುದು ಇಲ್ಲಿನ ಕನ್ನಡಪರ ಚಟುವಟಿಕೆ ಸಾಬೀತುಪಡಿಸಿದೆ. ಇಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿದಂತಹ ಆನೇಕ ಮಹನೀಯರು ಕನ್ನಡ ಭಾಷೆ, ಸಂಸ್ಕøತಿಗಾಗಿ ಬಲುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಪತ್ರಕರ್ತ ಪ್ರಕಾಶ್ ಇಳಂತಿಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸೃಜನಶೀಲ ಬರವಣಿಗೆಯೊಂದಿಗೆ ಓದುಗನ ಮನತಟ್ಟುವ ಕೃತಿಗಳು ಎಂದಿಗೂ ಸಾರ್ಥಕತೆ ನೀಡಲು ಸಾಧ್ಯ. ಪ್ರಸನ್ನ ಚೆಕ್ಕೆಮನೆ ಅವರ ಕೃತಿ, ಸಾಹಿತ್ಯಾಸಕ್ತರಲ್ಲದವರನ್ನೂ ಅತ್ತ ಆಕರ್ಷಿಸುವಂತಹ ಬರವಣಿಗೆಯನ್ನು ಹೊಂದಿರುವುದಾಗಿ ತಿಳಿಸಿದರು.

ರಮಾ ಎಚ್ ಭಟ್  ದೀಪ ಪ್ರಜ್ವಲನೆಗೊಳಿಸಿ ಶುಭಹಾರೈಸಿದರು. ಎಡನೀರಿನ ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ, ತಂತ್ರಿವರ್ಯ ಶಂಕರನಾರಾಯಣ ಶರ್ಮಾ ಗೋಸಾಡ, ಪತ್ರಕರ್ತ ಗಂಗಾಧರ್ ತೆಕ್ಕೆಮೂಲೆ, ವೆಂಕಟಕೃಷ್ಣ ಭಟ್, ರಮಾ, ಶುಭ, ರಾಜಶ್ರೀ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಶುಭಾ ಕಾರ್ಯಕ್ರಮ ನಿರೂಪಿಸಿದರು. ಮಾನಸ ಪ್ರಾರ್ಥನೆ ಹಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries