ಕಾಸರಗೋಡು: ಕಾಸರಗೋಡು ಜಿಲ್ಲೆನ್ನು ಸಂಪೂಣ್ ಮಾಲಿನ್ಯ ಮುಕ್ತ ಜಿಲ್ಲೆಯಾಗಿ ಮಾ.30ರ ಮೊದಲು ಘೋಷಿಸಲು ಅಗತ್ಯ ಕ್ರಮಗಳಿಗಾಗಿ ಕಾಲಾನುಕಾಲಕ್ಕೆ ಕೈಗೊಳ್ಳಬೇಕಾದ ಕಾರ್ಯಯೋಜನೆಗಳಿರಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಆಗ್ರಹಿಸಿದರು.
ಡಿಪಿಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಸ ಮುಕ್ತ ನವಕೇರಳ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಭಿಯಾನದ ಕಾರ್ಯದರ್ಶಿಗಳು, ಸಮನ್ವಯ ಸಮಿತಿ ಸದಸ್ಯರು, ಹಸಿರು ಕೇರಳ ಮಿಷನ್, ಕಿಲಾ, ನೈರ್ಮಲ್ಯ ಮಿಷನ್, ಸಂಪನ್ಮೂಲ ವ್ಯಕ್ತಿಗಳು, ಕುಟುಂಬಶ್ರೀ, ಕ್ಲೀನ್ ಕೇರಳ ಕಂಪನಿ, ಕೆಎಸ್‍ಡಬ್ಲ್ಯೂಎಂಪಿಯ ಬ್ಲಾಕ್, ಮಗರಸಭೆ ಮತ್ತು ವಲಯ ಸಂಯೋಜಕರೊಂದಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು.
ಎಡಿಎಂ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯಾಡಳಿತ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ.ಬಾಲರಾಜ್, ಹಸಿರು ಕೇರಳ ಮಿಷನ್ ರಾಜ್ಯ ಕಾರ್ಯಕ್ರಮ ಅಧಿಕಾರಿ ಕೃಷ್ಣಕುಮಾರ್,. ಸ್ವಚ್ಛತಾ ಮಿಷನ್‍ನ ಪ್ರತಿನಿಧಿ ಮಿಥುನ್, ಪ್ರಚಾರ ಕಾರ್ಯದರ್ಶಿ ಸುಹಾನಾ, ಕೆಎಸ್‍ಡಬ್ಲ್ಯುಎಂಪಿ ಪ್ರತಿನಿಧಿ ಹಿರಣ್‍ಕೃಷ್ಣ ಮಾತನಾಡಿದರು.
ನಂತರ ಪ್ರಚಾರ ಕಾರ್ಯಗಳನ್ನು ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಜಿಲ್ಲಾ ನೈರ್ಮಲ್ಯ ಮಿಷನ್ ಸಂಯೋಜಕ ಪಿ. ಜಯನ್, ಸಾವಯವ ತ್ಯಾಜ್ಯ ನಿರ್ವಹಣೆ ಕುರಿತು ಕೆ.ಸಿಮಿ, ವಿಶೇಷ ತ್ಯಾಜ್ಯ ನಿರ್ವಹಣೆ ಕುರಿತು ಕೆ.ವಿ.ರಂಜಿತ್, ಡಿಜಿಟಲ್ ಮಾನಿಟರಿಂಗ್ ಕುರಿತು ಟಿ.ವಿ.ಸುಭಾಷ್ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಕುರಿತು ಎಚ್. ಕೃಷ್ಣ ಮತ್ತು ಮುಹಮ್ಮದ್ ಮದನಿ ಅವರು ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಷಯ ಮಂಡಿಸಿದರು. ನಂತರ ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್, ನಗರ ಯೋಜನಾಧಿಕಾರಿ ಲೀಲಿತಿ, ಕಾರ್ಯಪಾಲಕ ಅಭಿಯಂತರ ಶೈನಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶ್ಯಾಮಲಕ್ಷ್ಮಿ. ಎಸ್, ಉಪನಿರ್ದೇಶಕ ಕೆ. ವಿ.ಹರಿದಾಸ್, ಸ್ವಚ್ಛತಾ ಮಿಷನ್ ಯುವ ವೃತ್ತಿಪರ ಎಸ್.ಎಚ್.ಅಂಜಲಿ, ಕುಟುಂಬಶ್ರೀ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ ಮತ್ತು ಕಿಲಾ ಸಂಚಾಲಕ ಕೆ.ಅಜಯಕುಮಾರ್ ಮಾತನಾಡಿ, ಚರ್ಚೆಯನ್ನು ಕ್ರೋಡೀಕರಿಸಿದರು. ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜಿ. ಸುಧಾಕರನ್ ಸ್ವಾಗತಿಸಿ, ಕೆಎಸ್‍ಡಬ್ಲ್ಯುಎಂಪಿ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಿಥುನ್ ಕೃಷ್ಣನ್ ವಂದಿಸಿದರು.