ತಿರುವನಂತಪುರಂ: ಧರ್ಮದ ಹೆಸರಿನಲ್ಲಿ ಐಎಎಸ್ ಅಧಿಕಾರಿಗಳ ವಾಟ್ಸ್ಆ್ಯಪ್ ಗ್ರೂಪ್ ಸೃಷ್ಟಿಸಿರುವ ಕುರಿತು ತಿರುವನಂತಪುರಂ ನಗರ ಪೋಲೀಸ್ ಆಯುಕ್ತರು ಡಿಜಿಪಿಗೆ ವರದಿ ಹಸ್ತಾಂತರಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದ ಉದ್ಯಮ ನಿರ್ದೇಶಕ ಕೆ.ಗೋಪಾಲಕೃಷ್ಣನ್ ಪೋನ್ ಫಾರ್ಮಾಟ್ ಮಾಡಿ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ.
ಪೋರೆನ್ಸಿಕ್ ಪರೀಕ್ಷೆಯಲ್ಲಿ ಯಾವುದೇ ಹ್ಯಾಕಿಂಗ್ ಪತ್ತೆಯಾಗಿಲ್ಲ. ಪೋರೆನ್ಸಿಕ್ ವರದಿಯನ್ನು ಪೋಲೀಸರಿಗೆ ಹಸ್ತಾಂತರಿಸಲಾಗಿದೆ. ಗೂಗಲ್‍ನ ಪರೀಕ್ಷೆಯು ಹ್ಯಾಕಿಂಗ್ ಸಾಧ್ಯತೆಯನ್ನು ತಳ್ಳಿಹಾಕಿದೆ. ಡಿಜಿಪಿ ಶಿಫಾರಸು ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು.
ವಾಟ್ಸಾಪ್ ಗ್ರೂಪ್‍ಗಳು ಕೆ ಗೋಪಾಲಕೃಷ್ಣನ್ ಅವರ ಪೋನ್‍ನಿಂದ ಬಂದವು ಎಂದು ಮೆಟಾದ ಉತ್ತರವು ಮೊದಲೇ ಬಂದಿತ್ತು. ಆದರೆ ಪೋನ್ ಫಾಮ್ರ್ಯಾಟ್ ಆಗಿದ್ದು, ಎಲ್ಲಾ ಡೇಟಾ ಡಿಲೀಟ್ ಆಗಿದ್ದರಿಂದ ಸೈಬರ್ ಪೋಲೀಸರಿಗೆ ವಿವರ ಲಭ್ಯವಾಗಿಲ್ಲ.
ಧಾರ್ಮಿಕ ಗುಂಪುಗಳನ್ನು ಪ್ರತ್ಯೇಕಿಸಿ ಪ್ರತ್ಯೇಕ ವಾಟ್ಸಾಪ್ ಗುಂಪುಗಳನ್ನು ರಚಿಸುವುದು ಸೇವಾ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ಮಲ್ಲು ಹಿಂದೂ ಅಧಿಕಾರಿಗಳು ಮತ್ತು ಮಲ್ಲು ಮುಸ್ಲಿಂ ಅಧಿಕಾರಿಗಳ ಹೆಸರಿನಲ್ಲಿ ಬಂದಿರುವ ಗ್ರೂಪ್‍ಗಳು ತಮ್ಮದಲ್ಲ, ಪೋನ್ ಹ್ಯಾಕ್ ಮಾಡಲಾಗಿದೆ ಎಂದು ಕೈಗಾರಿಕಾ ಇಲಾಖೆ ನಿರ್ದೇಶಕರು ವಿವರಿಸಿದರು. ಹಿಂದೂ ಗ್ರೂಪ್‍ನ ಅಡ್ಮಿನ್ ಆಗಿದ್ದ ಕೆ.ಗೋಪಾಲಕೃಷ್ಣನ್ ಅವರು ಮಲ್ಲು ಮುಸ್ಲಿಂ ಆಫೀಸರ್ಸ್ ಗ್ರೂಪ್‍ನ ಅಡ್ಮಿನ್ ಆಗಿದ್ದರು. ಆದರೆ ಮುಸ್ಲಿಂ ಗ್ರೂಪ್‍ಗೆ ಸೇರಿದ ಅಧಿಕಾರಿಯೊಬ್ಬರು ಇದರ ಹಿಂದಿನ ಅಪಾಯವನ್ನು ಸೂಚಿಸಿದ ನಂತರ, ಗ್ರೂಪ್ ಅನ್ನು ಕೆಲವೇ ಗಂಟೆಗಳಲ್ಲಿ ಅಳಿಸಲಾಗಿದೆ.
ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.
ಜನಪರ, ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ
ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.
ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.
ಇದು ಗಡಿನಾಡು ಕಾಸರಗೋಡಿನ ಜನಧ್ವನಿ.