HEALTH TIPS

ನೀಲೇಶ್ವರ ಸುಡುಮದ್ದು ದುರಂತ-ಗಂಭೀರ ಗಾಯಗೊಂಡಿದ್ದ ಇಬ್ಬರು ಮೃತ್ಯು: ಆರೋಪಿಗಳ ಜಾಮೀನು ರದ್ದುಗೊಳಿಸಿದ ನ್ಯಾಯಾಲಯ

 ಕಾಸರಗೋಡು: ನೀಲೇಶ್ವರ ತೆರು ಅಞೂಟ್ಟಂಬಲ ವೀರಕ್ಕಾವು ಶ್ರೀ ಮೂವಾಳಂಕುಯಿ ಚಾಮುಂಡಿ ಕ್ಷೇತ್ರ ಸುಡುಮದ್ದು ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. 

ಚೆಯ್ಯಂಗೋಡ್ ಕಿನಾವೂರ್ ನಿವಾಸಿ ರತೀಶ್(32) ಹಾಗೂ ಸಂದೀಪ್ ಮೃತಪಟ್ಟವರು. ಸಂದೀಪ್ ಅವರು ಶನಿವಾರ ರಾತ್ರಿ ಹಾಗೂ ರತೀಶ್ ಭಾನುವಾರ ಮೃತಪಟ್ಟಿದ್ದಾರೆ. ಗಂಭೀರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ನಲ್ಲಿ ಚಿಕಿತ್ಸೆಯಲ್ಲಿದ್ದರು.  ಚೆಯ್ಯಂಗೋಡ್ ಪೇಟೆಯಲ್ಲಿ ಕ್ವೌರ ವೃತ್ತಿ ನಡೆಸುತ್ತಿದ್ದ ರತೀಶ್ ಅವಿವಾಹಿತರಾಗಿದ್ದರು. ಸಂದೀಪ್ ಚೆಯ್ಯಂಗೋಡ್‍ನಲ್ಲಿ ಆಟೋರಿಕ್ಷಾ ಚಾಲಕರಾಗಿದ್ದರು.ಚೆಯ್ಯಂಗೋಡ್ ಕಿನಾವೂರ್ ನಿವಾಸಿ ರತೀಶ್(32)ಕೋಯಿಕ್ಕೋಡ್ ಮಿಮ್ಸ್ ಆಸ್ಪತ್ರೆಯಲ್ಲೂ, ಸಂದೀಪ್(38) ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲೂ ಮೃತಪಟ್ಟಿದ್ದಾರೆ.

ಅ. 28ರಂದು ರಾತ್ರಿ ನಡೆದ ಸುಡುಮದ್ದು ದುರಂತದಲ್ಲಿ 154ಮಂದಿ ಗಾಯಗೊಂಡಿದ್ದರು. ಇವರಲ್ಲಿ 34ಮಂದಿ ಇಂದಿಗೂ ಐಸಿಯು ನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಗಾಯಾಳುಗಳು ಕಣ್ಣೂರು, ಕಾಞಂಗಾಡು, ಕಾಸರಗೋಡು ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಈ ಮಧ್ಯೆ ಪ್ರಕರಣದ ಆರೋಪಿಗಳಾದ ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಶೇಖರನ್, ಕಾರ್ಯದರ್ಶಿ ಭರತನ್, ಪಟಾಕಿ ಸಿಡಿಸಿದ್ದ ರಾಜೇಶ್ ಅವರಿಗೆ ಹೊಸದುರ್ಗ ಸಿಜೆಎಂ ನ್ಯಾಯಾಲಯ ಮಂಜೂರುಗೊಳಿಸಿದ್ದ ಜಾಮೀನನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ರದ್ದುಗೊಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries