ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಗರಿಕರಿಗಾಗಿ ತೋರಿಸುತ್ತಿರುವ ಕಾಳಜಿ, ವಿಶ್ವಕ್ಕೆ ಮಾದರಿಯಾಗಿದೆ ಎಂಬುದಾಗಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೈ. ಕೃಷ್ಣದಾಸ್ ತಿಳಿಸಿದ್ದಾರೆ.
ಅವರು ಮೋದಿ ಅಭಿಮಾನಿ ಬಳಗ ಮಯಿಲಾಟಿಯ ವತಿಯಿಂದ ಉದುಮ ಪಂಚಾಯಿತಿ 93 ಮತ್ತು 94ನೇ ಬೂತ್ ಸಮಿತಿ ನೇತೃತ್ವದಲ್ಲಿ 70 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ ಉದ್ಘಾಟಿಸಿ ಮಾತನಾಡಿದರು. ಮೈಲಾಟಿಯ ಮೋದಿ ಅಭಿಮಾನಿ ಕಛೇರಿಯಲ್ಲಿ ಆಯೋಜಿಸಲಾಗಿತ್ತು.ಬೂತ್ ಸಮಿತಿ ಅಧ್ಯಕ್ಷ ವಿಜಯನ್ ಮೈಲಾಟಿ ಅದ್ಯಕ್ಷತೆ ವಹಿಸಿದ್ದರು.
ಪಂಚಾಯಿತಿ ಸಮಿತಿ ಕಾರ್ಯದರ್ಶಿ ಮಧುಸೂದನನ್ ಅಡ್ಕತ್ವಯಲ್ ಹಾಗೂ ಕಾರ್ಯದರ್ಶಿ ವಿನಿನ್ ಕುಮಾರ್ ಉಪಸ್ಥಿತರಿದ್ದರು. ಬೂತ್ ಸಮಿತಿ ಕಾರ್ಯದರ್ಶಿ ಅನಿಲ್ ಞÉೂಕ್ಲಿ ಸ್ವಾಗತಿಸಿದರು. ಮನೋಜ್ ಞÉೂೀಕ್ಲಿ ವಂದಿಸಿದರು.