ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಶಬರಿಮಲೆ ಯಾತ್ರಾರ್ಥಿಗಳ ಸಂಚಾರ ಸೇರಿದಂತೆ ವಾಹನ ದಟ್ಟಣೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಪಘಾತಗಳನ್ನು ತಪ್ಪಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.
ಸಂಚಾರ ಸುರಕ್ಷತೆ ಕುರಿತು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಷಟ್ಪಥ ಕಾಮಗಾರಿ ನಡೆಯುತ್ತಿರುವ ತಲಪ್ಪಾಡಿಯಿಂದ ಕಾಲಿಕ್ಕಡವ್ ವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿ ಸುರಕ್ಷತೆ ಕುರಿತು ವರದಿ ನೀಡುವಂತೆ ಆರ್‍ಟಿಒಗೆ ಜಿಲ್ಲಾಧಿಕಾರಿ ಸೂಚಿಸಿದರು. ವರದಿಯ ಆಧಾರದ ಮೇಲೆ ಹೆದ್ದಾರಿ ನಿರ್ಮಾಣ ಸಂಸ್ಥೆಗಳು ಅಗತ್ಯ ಸೌಕರ್ಯಗಳನ್ನು ಸಿದ್ಧಪಡಿಸಬೇಕು. ಕರ್ನಾಟಕ ಮತ್ತು ಇತರ ರಾಜ್ಯಗಳ ಯಾತ್ರಾರ್ಥಿಗಳಿಗೆ ಸಹಾಯವಾಗುವಂತೆ ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ದಿಕ್ಕುಗಳ ಸಊಚನಾ ಫಲಕಗಳನ್ನು ಅಳವಡಿಸಲಾಗುವುದು.
ಶಬರಿಮಲೆ ಯಾತ್ರಿಕರು ಪ್ರಯಾಣಕ್ಕೆ ರಾಷ್ಟ್ರೀಯ ರಸ್ತೆಯನ್ನು ಮಾತ್ರ ಬಳಸುವಂತೆ ಎಚ್ಚರ ವಹಿಸಬೇಕು. ನಿರ್ಮಾಣ ಹಂತದಲ್ಲಿರುವ ಪ್ರದೇಶಗಳಲ್ಲಿ ಕಿರಿದಾದ ರಸ್ತೆಗಳಲ್ಲಿ ಸೂಚಕಗಳನ್ನು ಇರಿಸಲಾಗುವುದು. ಕೆಳ ತಟ್ಟಿರುವ ರಸ್ತೆಗಳಲ್ಲಿ ಕಾನ್ಕೇವ್ ಲೆನ್ಸ್ ಅಳವಡಿಕೆಗೆ ಚಿಂತನೆ ನಡೆಸಲಾಗಿದ್ದು, ರಿಫ್ಲೆಕ್ಟರ್ ಗಳನ್ನು ಸೂಕ್ತರೀತಿಯಲ್ಲಿ ಅಳವಡಿಸಿ ಸರ್ವಿಸ್ ರಸ್ತೆಗಳಲ್ಲಿ ಸಡಿಲವಾದ ಸ್ಲ್ಯಾಬ್ ಗಳನ್ನು ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಾಞಂಗಾಡ್-ಪಾಣತ್ತೂರು ರಾಜ್ಯ ಹೆದ್ದಾರಿ, ಕಾಸರಗೋಡು - ಕಾಞಂಗಾಡ್ ಲೋಕೋಪಯೋಗಿ ರಾಜ್ಯ ರಸ್ತೆ ಮತ್ತು ಮಲೆನಾಡು ಹೆದ್ದಾರಿಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಹೋಟೆಲ್‍ಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟದ ಬಗ್ಗೆ ತಪಾಸಣೆ ನಡೆಸುವುದರ ಜತೆಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಹೊಟೇಲ್‍ಗಳಲ್ಲಿ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಶಬರಿಮಲೆ ಯಾತ್ರಾರ್ಥಿಗಳಿಗೆ ವಿಶ್ರಾಂತಿ ಕೇಂದ್ರಗಳನ್ನು ಸಿದ್ಧಪಡಿಸುವ ಬಗ್ಗೆಯೂ ಪರಿಗಣನೆಯಲ್ಲಿದೆ. ಪೆÇಲೀಸರಿಂದ ರಾತ್ರಿ ಹೆದ್ದಾರಿ ಗಸ್ತು ಬಿಗಿಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಕಾಸರಗೋಡು ಆರ್‍ಟಿಒ ಎನ್‍ಫೆÇೀರ್ಸ್‍ಮೆಂಟ್ ಪ್ರತಿನಿಧಿ, ಡಿಎಸ್ ಜಯರಾಜ್ ತಿಲಕ್, ಎನ್‍ಫೆÇೀರ್ಸ್‍ಮೆಂಟ್ ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್ ರೆಜಿ ಕುರಿಯಾಕೋಸ್, ಡಿಸಿಆರ್‍ಬಿ ಎಎಸ್‍ಐ ಸುಭಾಷ್ ಚಂದ್ರನ್, ಎನ್‍ಎಚ್‍ಎಐ ಸಂಪರ್ಕ ಅಧಿಕಾರಿ ಕೆ.ಸೇತುಮಾಧವನ್, ಜನರಲ್ ಆಸ್ಪತ್ರೆ ಡೆಪ್ಯುಟಿ ಸೂಪರಿಂಟೆಂಡೆಂಟ್ ಡಾ. ಎ.ಜಮಾಲ್ ಅಹಮದ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ನಿರ್ಮಾಣ ಕಂಪೆನಿಗಳ ಪ್ರತಿನಿಧಿಗಳಾದ ಎಂ. ನಾರಾಯಣನ್, ಎಸ್.ಎಂ.ಕಾರ್ಡ ರೆಡ್ಡಿ, ಅಜಿತ್ ಕುಮಾರ್, ಪಿ.ವಿ.ಭಾಸ್ಕರನ್ ಉಪಸ್ಥಿತರಿದ್ದರು.