ಜಾರ್ಜ್‌ಟೌನ್ : ಪ್ರಧಾನಿ ನರೇಂದ್ರ ಮೋದಿ ಅವರು ವೆಸ್ಟ್ ಇಂಡೀಸ್‌ನ ಪ್ರಮುಖ ಕ್ರಿಕೆಟ್ ಆಟಗಾರರನ್ನು ಜಾರ್ಜ್‌ಟೌನ್‌ನಲ್ಲಿ ಗುರುವಾರ ಭೇಟಿ ಮಾಡಿದರು.
ಪ್ರಧಾನಿ ಮೋದಿ ಬುಧವಾರ ಗಯಾನಕ್ಕೆ ಭೇಟಿ ನೀಡಿದ್ದಾರೆ. ಇದರೊಂದಿಗೆ 50 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿದಂತಾಗಿದೆ.
'ಗಯಾನಾದ ಅಧ್ಯಕ್ಷ ಇರ್ಫಾನ್ ಆಲಿ ಅವರೊಂದಿಗೆ ಕ್ರಿಕೆಟ್ ಆಟಗಾರರನ್ನು ಭೇಟಿ ಮಾಡಿದರು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ 'ಎಕ್ಸ್'ನಲ್ಲಿ ತಿಳಿಸಿ ಫೋಟೊಗಳನ್ನು ಹಂಚಿಕೊಂಡಿದೆ.