ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ನೀಲೇಶ್ವರಂ ನಗರಸಭೆ ಮತ್ತು ಚೆರುವತ್ತೂರು ಗ್ರಾಮ ಪಂಚಾಯಿತಿಯ ಜನಸಂಘಟನಾ ಸಮಿತಿಯ ನೇತೃತ್ವದಲ್ಲಿ ಅಚ್ಚಾಂತುರ್ತಿ ತೇಜಸ್ವಿನಿ ಹೊಳೆಯಲ್ಲಿ ಆಯೋಜಿಸಲಾಗಿದ್ದ ಉತ್ತರ ಮಲಬಾರ್ ಜಲೋತ್ಸವ ಸಂಪನ್ನಗೊಂಡಿತು.
ಪುರುಷರ 25 ಜನರ ರೋಯಿಂಗ್ ಸ್ಪರ್ಧೆಯಲ್ಲಿ ಅಯಿಕ್ಕೋಡನ್ ಅಚ್ಚಾಂತುರ್ತಿ ಪ್ರಥಮ ಸ್ಥಾನ ಪಡೆದುಕೊಂಡರು. ಎಕೆಜಿ ಪೂಡೋತುರುತ್ತಿ ದ್ವಿತೀಯ ಹಾಗೂ ವಾಯಲ್ಕರ ವೆಂಙËಡ್ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ 15 ಮಂದಿಯನ್ನೊಳಗೊಂಡ ರೋಯಿಂಗ್ ರೋಚಕ ಸ್ಪರ್ಧೆಯಲ್ಲಿ ವಯಲ್ಕರ ವೆಙËಟ್ ಅಗ್ರಸ್ಥಾನ ಪಡೆದರು. ಕೃಷ್ಣಪಿಳ್ಳೆ ಕಾವುಂಚಿರದ ಎರಡೂ ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿತು. ಭಾನುವಾರ ನಡೆದ 15ಮಂದಿ ಪುರುಷರ ರೋಯಿಂಗ್ ಸ್ಪರ್ಧೆಯಲ್ಲಿ ಏ. ಕೆ. ಜಿ.ಪೆÇೀಡೋಂತುರುತಿ ಪ್ರಥಮ ಸ್ಥಾನ, ಕೃಷ್ಣಪಿಳ್ಳೆ ಕಾವುಂಚಿರ ದ್ವಿತೀಯ ಹಾಗೂ ಎ.ಕೆ.ಜಿ ಮಯಿಚ್ಚ ತೃತೀಯ ಸ್ಥಾನ ಪಡೆದುಕೊಮಡಿತು. ಮಹಿಳೆಯರ 15ಮಂದಿಯನ್ನೊಳಗೊಂಡ ರೋಯಿಂಗ್ ಮತ್ತು ಪುರುಷರ 25 ಮದಿಯನ್ನೊಳಗೊಂಡ ರೋಯಿಂಗ್ ಸ್ಪರ್ಧೆ ಫೈನಲ್‍ಗಳನ್ನು ಪಂದ್ಯಾಟದಲ್ಲಿ ಗಮನಸೆಳೆಯಿತು. ವಿಜೇತರಿಗೆ ತ್ರಿಕ್ಕರಿಪುರ ಶಾಸಕ ಎಂ ರಾಜಗೋಪಾಲನ್ ಪ್ರಶಸ್ತಿಫಲಕ ವಿತರಿಸಿದರು.