HEALTH TIPS

ಕಾಂಚಿ ಕಾಮಕೋಟಿ ಪೀಠಾಧಿಪತಿಗೆ ಶ್ರೀಎಡನೀರುಮಠಾಧೀಶರಿಂದ ಗುರುವಂದನೆ

ಕಾಸರಗೋಡು: ಕಾಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ಎಡನೀರು ಮಠದಲ್ಲಿ ಜರುಗಿತು. ಶ್ರೀ ಎಡನೀರುಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಶ್ರೀಮಠದ ಭಕ್ತಾದಿಗಳ ಉಪಸ್ಥಿತಿಯಲ್ಲಿ ಕಾಂಚಿಶ್ರೀಗಳನ್ನು ಶಾಲುಹೊದಿಸಿ, ಪಲಪುಷ್ಪ, ಶ್ರೀದೇವರ ವಿಗ್ರಹವನ್ನು ಸ್ಮರಣಿಕೆಯಗಿ ಸಮರ್ಪಿಸಿದರು.


 ಈ ಸಂದರ್ಭ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಕಲೆ, ಸಂಸ್ಕøತಿ, ಧಾರ್ಮಿಕ ವಿಚಾರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಎಡನೀರು ಮಠ ಹಾಗೂ ಕಾಂಚಿಕಾಮಕೋಟಿ ಮಠದೊಂದಿಗಿನ ಸಂಬಂಧ ಅವಿನಾಭಾವದಿಂದ ಕೂಡಿರುವುದಾಗಿ ತಿಳಿಸಿದರು. ಭೂಮಸೂದೆ ಕಾಯ್ದೆಗೆ ಸಂಬಂಧಿಸಿ ನಡೆಸಿದ ಕಾನೂನು ಹೋರಾಟದ ಮೂಲಕ ದೇಶದ ಪರಮೋಚ್ಛ ನ್ಯಾಯಾಲಯದಲ್ಲಿ ಶ್ರೀಮಠದ ಹೆಸರು ದಾಖಲಾಗುವಂತೆ ಮಾಡಿದ್ದ ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಶ್ರೀಶಂಕರ ಪರಂಪರೆಯನ್ನು ಪ್ರಚಾರಪಡಿಸುವುದರ ಜತೆಗೆ ಕಲೆ, ಶಿಕ್ಷಣಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಇದೇ ಪರಂಪರೆಯನ್ನು ಮುಂದುವರಿಸುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಸೇವಾತತ್ಪರತೆ ಶ್ಲಾಘನೀಯ. ದೇಶದ ಪುರಾತನ ಸಂಸ್ಕøತಿಗೆ ತಲೆಬಾಗುವುದರ ಜತೆಗೆ ಮೂಲಧರ್ಮಕ್ಕೆ ಗೌರವ ನೀಡಿದಾಗ ಸನಾತನ ಧರ್ಮ ಮತ್ತಷ್ಟು ಪ್ರಾಜ್ವಲ್ಯಮಾನವಾಗುವುದಾಗಿ ತಿಳಿಸಿದರು.

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕಾಂಚಿಶ್ರೀಗಳ ಭೇಟಿಯಿಂದ ಎಡನೀರು ಮಠದ ಭಕ್ತವೃಂದದ ಹಲವು ಸಮಯದ ಕಾಯುವಿಕೆಗೆ ಮುಕ್ತಿ ಲಭಿಸಿದೆ. ಶ್ರೀಕೇಶವಾನಂದ ಭಾರತೀ ಸ್ವಾಮೀಜಿ ಅವರು ಕೃಷ್ಣೈಕ್ಯರಾದ ಸಂದರ್ಭ ಕಾಂಚಿಶ್ರೀಗಳಿಂದ ಸನ್ಯಾಸತ್ವ ಸ್ವೀಕರಿಸುವ ಸೌಭಾಗ್ಯ ಲಭಿಸಿದೆ. ವೈದಿಕ ಸಂಸ್ಕøತಿ, ವೇದ ಸಂಸ್ಕøತಿಯ ಬೆಳವಣಿಗೆಗೆ ಹಾಗೂ  ಸನಾತನ ಧರ್ಮದ ಉಳಿವಿಗೆ ಕಾಂಚಿಮಠ ಮಹತ್ತರ ಕೊಡುಗೆ ನೀಡಿರುವುದಾಗಿ ತಿಳಿಸಿದರು.

ಕರ್ನಾಟಕ ಸರ್ಕಾರದ ಮಾನವಹಕ್ಕು ಆಯೋಗದ ಅಧ್ಯಕ್ಷ ಟಿ. ಶ್ಯಾಮಭಟ್, ಕಾಂಚಿಕಾಮಕೋಟಿ ಮಠದ ವಿದ್ವಾಂಸರು ಉಪಸ್ಥಿತರಿದ್ದರು. ಕಯ್ಯೂರು ನಾರಾಯಣ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಖ್ಯಾತ ಕಲಾವಿದರಿಂದ 'ಜಾಂಬವತಿ ಕಲ್ಯಾಣ' ಯಕ್ಷಗಾನ ಬಯಲಾಟ ನಡೆಯಿತು.


  


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries