ಕಾಸರಗೋಡು: ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲೂ ವಿದ್ಯುತ್ ಬಿಲ್ ಗ್ರಾಹಕರಿಗೆ ಒದಗಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ರಾಜ್ಯ ವಿದ್ಯುನ್ಮಂಡಳಿ ಮುಖ್ಯ ಅಭಿಯಂತೆ ಸಜಿತಾ ಕುಮಾರಿ ಟಿ.ಎಸ್ ಲಿಖಿತ ಭರವಸೆ ನೀಡಿದ್ದಾರೆ.
ರಾಜ್ಯಾದ್ಯಂತ ವಿದ್ಯುತ್ ಬಿಲ್ ಮಲಯಾಳದಲ್ಲಿ ನೀಡಲಾಗುತ್ತಿದ್ದು, ಇದೇ ವ್ಯವಸ್ಥೆಯನ್ನು ಕಾಸರಗೋಡಿನಲ್ಲಿ ಮುಂದುವರಿಸಿದಲ್ಲಿ, ಇದು ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಹೆಚ್ಚಿನ ಸಮಸ್ಯೆ ತಂದೊಡ್ಡಲಿದ್ದು, ಈ ಹಿನ್ನೆಲೆಯಲ್ಲಿ ಕನ್ನಡದಲ್ಲೂ ಬಿಲ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ 'ಕಾಸರಗೋಡಿನ ಕನ್ನಡಿಗರು'ಎಂಬ ವಾಟ್ಸಪ್ ಗ್ರೂಪ್ ಅಡ್ಮಿನ್ ಜಯನಾರಾಯಣ ತಾಯನ್ನೂರ್ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ್ದ ಮನವಿಯಲ್ಲಿ ಮನವಿ ಮಾಡಿದ್ದರು. ಮನವಿ ಪರಿಶೀಲಿಸಿದ ವಿದ್ಯುನ್ಮಂಡಳಿ, ಮಲಯಾಳದ ಜತೆಗೆ ಕನ್ನಡದಲ್ಲೂ ವಿದುತ್ ಬಿಲ್ ಪೂರೈಸುವ ಬಗ್ಗೆ ಪರಿಗಣಿಸಲಾಗುವುದು, ಅಲ್ಲದೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಲ್ ನೀಡುವ ಪಿಓಎಸ್ ಮೆಶಿನ್‍ನಲ್ಲೂ ಕನ್ನಡ ಭಾಷೆಯನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಚೀಫ್ ಇಂಜಿನಿಯರ್ ಕಳುಹಿಸಿಕೊಟ್ಟಿರುವ ಪತ್ರದಲ್ಲಿ ತಿಳಿಸಿದ್ದಾರೆ.