ನವದೆಹಲಿ: ಭಾರತ ಮತ್ತು ಕೆನಡಾ ಮಧ್ಯದ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಪಾಕಿಸ್ತಾನ ಮೂಲದ ಹಲವರು, 'ಇಂಟರ್‌ಪೋಲ್ ಇತ್ತೀಚೆಗೆ ಭಾರತದ ಗೃಹ ಸಚಿವ ಅಮಿತ್ ಶಾ ಅವರನ್ನು ವಾಂಟೆಡ್ ಲಿಸ್ಟ್‌ಗೆ ಸೇರಿಸಿದೆ' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಾಫಿಕ್ ಕಾರ್ಡ್ ಅನ್ನು ಹಂಚಿಕೊಂಡಿದ್ದಾರೆ.

ಕೆನಡಾದಲ್ಲಿ ಇರುವ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿ ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣಾ ಕಾರ್ಯಕ್ಕೆ ಅಮಿತ್ ಶಾ ಅವರು ಆದೇಶಿಸಿದ್ದಾರೆ ಎಂದು ಕೆನಡಾದ ಸಚಿವ ಡೇವಿಡ್ ಮಾರಿಸನ್ ಅವರು ಇತ್ತೀಚೆಗೆ ಆರೋಪಿಸಿದ್ದರು. ಅದರ ಬೆನ್ನಲ್ಲೇ ಪಾಕ್‌ನ ಸಾಮಾಜಿಕ ಮಾಧ್ಯಮ ಬಳಕೆದಾರರು ಗ್ರಾಫಿಕ್ ಅನ್ನು ಹಂಚಿಕೊಂಡಿದ್ದಾರೆ.
ಈ ಗ್ರಾಫಿಕ್ ನಕಲಿ ಎಂಬುದನ್ನು ಪಿಟಿಐ ಫ್ಯಾಕ್ಟ್‌ಚೆಕ್ ಡೆಸ್ಕ್ ಪತ್ತೆಮಾಡಿದೆ. ಇಂಟರ್‌ಪೋಲ್ ಈ ರೀತಿಯ ಯಾವುದೇ ಸೂಚನೆಯನ್ನು ನೀಡಿಲ್ಲ ಮತ್ತು ಈ ಸಂಬಂಧ ಪಾಕ್ ಮತ್ತು ಕೆನಡಾದ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮಾಡಿರುವ ಪೋಸ್ಟ್‌ಗಳಲ್ಲಿ ಸತ್ಯಾಂಶ ಇಲ್ಲ ಎಂದು ಪಿಟಿಐ ತಿಳಿಸಿದೆ.
ಅದಾಗ್ಯೂ ಮಾರಿಸನ್ ಅವರ ಆರೋಪಗಳನ್ನು ಅಸಂಬದ್ಧ ಮತ್ತು ಆಧಾರರಹಿತ ಎಂದು ಭಾರತ ತಿರಸ್ಕರಿಸಿದೆ. ಅಲ್ಲದೆ ಈ ರೀತಿಯ ಆರೋಪಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದೆ.