HEALTH TIPS

ಭಾರತ- ಚೀನಾ ಸಂಘರ್ಷ ಶಮನ ಎದುರು ನೋಡುತ್ತಿವೆ: ಜೈಶಂಕರ್‌

        ಕ್ಯಾನ್‌ಬೆರಾ: ಪೂರ್ವ ಲಡಾಖ್‌ನಲ್ಲಿ ಸೇನಾ ಪಡೆಗಳ ವಾಪಸಾತಿಗೆ ಭಾರತವು ಚೀನಾ ಜತೆ ಮಾಡಿಕೊಂಡಿರುವ ಒಪ್ಪಂದವು ಮುಂದಿನ ದಿನಗಳಲ್ಲಿ ಉಭಯತ್ರರಿಗೂ ತೃಪ್ತಿಕರವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಹೇಳಿದ್ದಾರೆ.

         ಇಲ್ಲಿ ನಡೆದ ಚಿಂತಕರ ಚಾವಡಿಯ ಉದ್ಘಾಟನಾ ಸಮಾರಂಭದಲ್ಲಿ ಜೈಶಂಕರ್‌ ಅವರು ಆಸ್ಟ್ರೇಲಿಯಾದ ಕಾರ್ಯತಂತ್ರದ ನೀತಿ ಸಂಸ್ಥೆ (ಎಎಸ್‌ಪಿಐ) ಕಾರ್ಯನಿರ್ವಾಹಕ ನಿರ್ದೇಶಕ ಜಸ್ಟಿನ್ ಬಸ್ಸಿ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದರು.

         ಭಾರತ-ಚೀನಾ ಸಂಬಂಧದ ಇತ್ತೀಚಿನ ಪ್ರಗತಿಯ ಬಗ್ಗೆ ಬಸ್ಸಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೇನಾ ವಾಪಸಾತಿ ಪ್ರಕ್ರಿಯೆ ಈಗ ಮುಗಿದಿದೆ. ಈ ಒಪ್ಪಂದದ ಅನುಷ್ಠಾನವು ಮುಂದಿನ ದಿನಗಳಲ್ಲಿ ಉಭಯತ್ರರಿಗೂ ತೃಪ್ತಿಕರವಾಗಿರಲಿದೆ ಎಂದು ಹೇಳಿದರು.

          'ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಉಭಯ ದೇಶಗಳು ಜಮಾವಣೆ ಮಾಡಿದ್ದ ಸೇನಾಪಡೆಗಳನ್ನು ಸಂಘರ್ಷ ಶಮನಗೊಳಿಸುವ ಸಲುವಾಗಿ, ಒಪ್ಪಂದಂತೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಎರಡೂ ದೇಶಗಳು 2020ರ ಮೊದಲು ಎಲ್‌ಎಸಿಯ ಉದ್ದಕ್ಕೂ ಇದ್ದಿದ್ದಕ್ಕಿಂತಲೂ ಭಾರಿ ಸಂಖ್ಯೆಯಲ್ಲಿ ಸೇನೆ ನಿಯೋಜನೆ ಮಾಡಿವೆ. ಈ ಸಂಬಂಧ ಮಾತುಕತೆಗಳನ್ನು ನಡೆಸುವ ಆಯ್ಕೆಗಳನ್ನು ಉಭಯತ್ರರು ಇರಿಸಿಕೊಂಡಿದ್ದೇವೆ' ಎಂದು ಜೈಶಂಕರ್‌ ಹೇಳಿದರು.

'ಎರಡು ಸೇನೆಗಳು ಸಾಧ್ಯವಾದಷ್ಟು ತಮ್ಮ ಸಾಮಾನ್ಯ ಕಾರ್ಯಾಚರಣಾ ಸ್ಥಳಕ್ಕೆ ಹಿಂತಿರುಗಿವೆ. ಒಪ್ಪಂದದ ಪ್ರಕಾರ, 2020ರ ಹಿಂದಿದ್ದಂತೆಯೇ ಗಡಿಯಲ್ಲಿ ಗಸ್ತು ಪುನರಾರಂಭವಾಗುವ ನಿರೀಕ್ಷೆಯಿದೆ. ಇದು ವಾಸ್ತವವಾಗಿ, ನಾವು ಮಾತುಕತೆ ನಡೆಸಿರುವಂತೆಯೇ ನಡೆಯುತ್ತಿದೆ' ಎಂದೂ ಅವರು ಹೇಳಿದರು.

'ಈ ಅವಧಿಯಲ್ಲಿ (2020 ರ ನಂತರ), ಭಾರತ-ಚೀನಾ ಸಂಬಂಧದಲ್ಲಿ ಬಹಳಷ್ಟು ಪರಿಣಾಮ ಉಂಟಾಗಿತ್ತು. ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಬಹಳ ಮುಖ್ಯ. ಭಾರತ ಯಾವಾಗಲೂ ಇದನ್ನೇ ಬಯಸುತ್ತದೆ' ಎಂದು ಅವರು ಹೇಳಿದರು.

ಬ್ರಿಕ್ಸ್ ಮತ್ತು ಕ್ವಾಡ್‌ ಸದಸ್ಯ ರಾಷ್ಟ್ರವಾಗಿರುವ ಭಾರತವು ಈ ಎರಡೂ ಕೂಟದಲ್ಲಿ ತನ್ನ ಸ್ಥಾನವನ್ನು ಹೇಗೆ ಸಮತೋಲನದಿಂದ ಕಾಯ್ದುಕೊಳ್ಳುತ್ತದೆ ಎಂಬುದರ ಕುರಿತು ಮಾತನಾಡಿದ ಅವರು, ಭಾರತ ಪಶ್ಚಿಮೇತರ ರಾಷ್ಟ್ರ. ಆದರೆ, ಪಶ್ಚಿಮದ ವಿರೋಧಿಯಲ್ಲ ಎಂದರು.

        ಭಾರತೀಯ ವಲಸಿಗರ ಮಹತ್ವದ ಬಗ್ಗೆಯೂ ಮಾತನಾಡಿದ ಸಚಿವರು, ಭಾರತ-ಅಮೆರಿಕ ಸಂಬಂಧಗಳಲ್ಲಿನ ಬದಲಾವಣೆಯು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಬೆಳವಣಿಗೆಯೊಂದಿಗೆ ನಿಂತಿದೆ. ಇದನ್ನು ನೋಡಿ ಆಸ್ಟ್ರೇಲಿಯಾ ಕೂಡ ಕಲಿಯಬಹುದು. ಅನಿವಾಸಿ ಭಾರತೀಯರಿಗೆ ಇಲ್ಲಿ ಸೂಕ್ತ ಅವಕಾಶಗಳು ಸಿಕ್ಕಿದರೆ, ಅವರು ಸಹ ಆಸ್ಟ್ರೇಲಿಯಾದಲ್ಲಿ ಸಮಾನ ಪಾಲುದಾರರಾಗಿ ಗುರುತಿಸಿಕೊಳ್ಳುತ್ತಾರೆ. ಇದರಿಂದ ಅವರು ಈ ದೇಶಕ್ಕೆ ಹೆಚ್ಚು ಸೇವೆ ಸಲ್ಲಿಸುವ ಸಾಧ್ಯತೆಯಿದೆ. ಬೆಳೆಯುತ್ತಿರುವ ಉಭಯದೇಶಗಳ ಸಂಬಂಧಗಳು ಇನ್ನಷ್ಟು ಬಲಗೊಳ್ಳುತ್ತವೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries