ಕಾಸರಗೋಡು: ಕಾಸರಗೋಡಿನ ಮುನ್ನಾಡಿ ಪಲ್ಲತ್ತಿಕಲ್‍ನಲ್ಲಿರುವ ತುಳುನಾಡು ಇಕೋಗ್ರೀನ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ (ಎಫ್‍ಪಿಸಿ) ಲಿಮಿಟೆಡ್ ಕಾಸರಗೋಡು ಜಿಲ್ಲೆಯ ರೈತರಿಂದ ಸಂಗ್ರಹಿಸಿದ ಜೇನುತುಪ್ಪವನ್ನು ರಫ್ತು ಮಾಡಲು ಪ್ರಾರಂಭಿಸಿದೆ. ನ. 19 ರಂದು 360 ಕೆಜಿ ಜೇನುತುಪ್ಪವನ್ನು ಒಳಗೊಂಡಿರುವ ಮೊದಲ ರವಾನೆಯ ಫ್ಲ್ಯಾಗ್ ಆಫ್ ಅನ್ನು ಜಿಲ್ಲಾದಿಕಾರಿ ಕೆ. ಇನ್ಭಾÁಶೇಖರ್ ನಿರ್ವಹಿಸಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಅನ್ನಮ್ಮ ಜೋಸೆಫ್ ಮಾತನಾಡಿ, ಇದೊಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದ್ದು, ಜಿಲ್ಲೆಯ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಪಡೆಯಲು ಅನುಕೂಲವಾಗಲಿದೆ. ಎಫ್‍ಪಿಸಿ 1500 ನೋಂದಾಯಿತ ರೈತರನ್ನು ಹೊಂದಿದೆ ಮತ್ತು ರೈತರಿಂದ ನೇರವಾಗಿ ಕಚ್ಚಾ ಜೇನುತುಪ್ಪವನ್ನು ಸಂಗ್ರಹಿಸುತ್ತದೆ. ಕಂಪನಿ ಆವರಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಕಂಪನಿಯು ಪೂರ್ಣಗೊಳಿಸಿದ ರಫ್ತು ಮತ್ತು ಪರವಾನಗಿ ಕಾರ್ಯವಿಧಾನಗಳ ವಿವಿಧ ಅವಶ್ಯಕತೆಗಳನ್ನು ವಿವರಿಸಿದರು.
ಎಫ್‍ಪಿಸಿಗೆ ತಾಂತ್ರಿಕ ಬೆಂಬಲವನ್ನು ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಕಾಸರಗೋಡಿನ (ಸಿಪಿಸಿಆರ್‍ಐ) ಕೆವಿಕೆ ಒದಗಿಸುತ್ತದೆ.
ಸಭೆಯ ಅಧ್ಯಕ್ಷತೆಯನ್ನು ಕುಟ್ಟಿಕೋಲ್ ಗ್ರಾ.ಪಂ.ಅಧ್ಯಕ್ಷರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿ.ಪಿ.ಸಿ.ಆರ್.ಐ ಕಾಸರಗೋಡಿನ ಪ್ರಧಾನ ವಿಜ್ಞಾನಿ ಡಾ.ಕೆ.ಮುರಳೀಧರನ್, ಎಟಿಎಂಎ, ಕೃಷಿ, ಕೈಗಾರಿಕೆಗಳು, ಎಪಿಇಡಿಎ ಮತ್ತು ಕೃಷಿ ವಿಜ್ಞಾನ ಕೇಂದ್ರದಂತಹ ಸಾಲಿನ ಇಲಾಖೆಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
2016 ರಲ್ಲಿ ನಬಾರ್ಡ್‍ನ ಆರ್ಥಿಕ ಬೆಂಬಲದೊಂದಿಗೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಸಿಪಿಸಿಆರ್.ಐ ಕಾಸರಗೋಡು ಎಫ್.ಪಿ.ಒ ವನ್ನು ರಚಿಸಿತ್ತು. ತುಳುನಾಡು ಇಕೋಗ್ರೀನ್ ಎಫ್‍ಪಿಸಿಯ ನಿರ್ದೇಶಕರಾದ ಫಿಲಿಫ್ ಸ್ವಾಗತಿಸಿ, ಜಾರ್ಜ್ ಕುಟ್ಟಿ ವಂದಿಸಿದರು.