ವಯನಾಡ್: ಭಾರೀ ಸದ್ದು-ಗದ್ದಲಗಳಿಂದ ತುಂಬಿದ್ದ ಒಂದು ತಿಂಗಳ ಉಪಚುನಾವಣೆ ಪ್ರಚಾರವು ವಯನಾಡಿನಲ್ಲಿ ಬಹಿರಂಗ ಪ್ರಚಾರ ಸೋಮವಾರ ಕೊನೆಗೊಂಡಿದೆ.
ವಯನಾಡಿನಲ್ಲಿ ಭಾರೀ ಮಟ್ಟದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಬುಧವಾರ ವಯನಾಡ್ ಉಪಚುನಾವಣೆ ನಡೆಯಲಿದೆ. ಮಿತಗತಿಯಲ್ಲಿ ಆರಂಭವಾದ ಅಭಿಯಾನ ಅಂತಿಮ ಗಂಟೆಗಳಲ್ಲಿ ಬಿರುಸಿನಿಂದ ಕೊನೆಗೊಂಡಿತು.
ಎನ್ ಡಿಎ ಅಭ್ಯರ್ಥಿ ನವ್ಯಾಹರಿದಾಸ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಕಾರ್ಯಕರ್ತರೊಂದಿಗೆ ಕುಣಿದು ಕುಪ್ಪಳಿಸುವ ಮೂಲಕ ಜನರೊಂದಿಗೆ ಇದ್ದೇನೆ ಎಂದು ನವ್ಯಾಹರಿದಾಸ್ ಸ್ಪಷ್ಟಪಡಿಸಲು ಪ್ರಯತ್ನಿಸಿದರು.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪರವಾಗಿ ಪ್ರಚಾರ ಸಮಾಪನದಲ್ಲಿ ಭಾಗವಹಿಸಿದ್ದರು. ಎಡರಂಗದ ಚುನಾವಣೆ ಅಭ್ಯರ್ಥಿ ಸತ್ಯನ್ ಮೊಕೇರಿ ಅವರ ಅಂತಿಮ ಪ್ರಚಾರದಲ್ಲಿ ಸಚಿವ ರಾಜನ್ ಪ್ರಸಾದ್ ಭಾಗವಹಿಸಿದ್ದರು.