ಕಾಸರಗೋಡು: ಕಂದಾಯಜಿಲ್ಲಾ ಶಾಲಾ ಕಲೋತ್ಸವ ನ.26ರಿಂದ 30ರ ವರೆಗೆ ಉದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ. ನ. 26ಹಾಗೂ 27ರಂದು ವೇದಿಕೇತರ ಸ್ಪರ್ಧೆ, 28ರಿಂದ 30ರ ವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಏಳು ಶೈಕ್ಷಣಿಕ ಉಪಜಿಲ್ಲೆಗಳ 6ಸವಿರಕ್ಕೂ ಹೆಚ್ಚುಪ್ರತಿಭೆಗಳು ಕಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. 12ವೇದಿಕೆಗಳಲ್ಲಾಗಿ 316ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಈ ಬಾರಿ ಐದು ಗೋತ್ರ ನೃತ್ಯಗಳನ್ನೂ ಸ್ಪರ್ಧೆಯಲ್ಲಿ ಒಳಪಡಿಸಲಾಗಿದೆ.
ಐದು ದಿವಸಗಳ ಕಲ ಕಲೋತ್ಸವದಲ್ಲಿಪಾಲ್ಗೊಳ್ಳಲಿರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಭೋಜನ ಸೇರಿದಂತೆ ಅಹಾರ ವಿತರಣೆಗಾಗಿ ಸಂಗ್ರಹಿಸಲಾದ ಸಾಮಗ್ರಿಗಳ ಹಸಿರುವಾಣಿ ಮೆರವಣಿಗೆ ಕಿನಾತ್‍ನಿಂದ ಉದಿನೂರ್ ಕಲೋತ್ಸವ ನಗರದ ವರೆಗೆ ಜರುಗಿತು. ಪಡನ್ನ ಕುಟುಂಬಶ್ರೀ ಸಿಡಿಎಸ್ ಹಾಗೂ ಜಿಲ್ಲಾ ಕುಟುಂಬಶ್ರೀ ಮಿಷನ್ ಸಹಯೋಗದಲ್ಲಿ ಮೆರವಣಿಗೆ ನಡೆಸಲಾಯಿತು. ನೀಲೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಮೆರವಣಿಗೆ ಉದ್ಘಾಟಿಸಿದರು.