ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದ ಮುಂಭಾಗ ನೂತನವಾಗಿ ನಿರ್ಮಿಸಲಿರುವ ಸೇವಾ ಕೌಂಟರ್ ಹಾಗೂ ಶೌಚಾಲಯ ಕಟ್ಟಡ ಸಂಕೀರ್ಣಕ್ಕೆ ಭೂಮಿ ಪೂಜೆ ನಟರಾಜ ಕಲ್ಲೂರಾಯರ ಕಾರ್ಮಿಕತ್ವದಲ್ಲಿ ಜರಗಿತು.
ಈ ಸಂದರ್ಭದಲ್ಲಿ ನವೀಕರಣ ಸಮಿತಿಯ ನಾರಾಯಣಯ್ಯ ಮಾಸ್ತರ್, ಮುರಳಿ ಗಟ್ಟಿ ಪರಕ್ಕಿಲ, ರವೀಂದ್ರ ರೈ, ದೇಗುಲದ ಸಿಬ್ಬಂದಿ ಕೆ ಶಾಮ ಮಧ್ಯಸ್ತ, ಇಂಜಿನಿಯರ್ ಅನಿಲ್ ಕುಮಾರ್ ಕಣ್ಣೂರ್ ಮೊದಲಾದವರು ಸಹಕರಿಸಿದ್ದರು.