ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಎನ್. ಎಸ್. ಎಸ್ ಘಟಕದ ವತಿಯಿಂದ ನಿರ್ಮಿಸುವ ಮಗುವಿಗೊಂದು ಪ್ರೀತಿಯ ಮನೆ ಯೋಜನೆಯ ನಿರ್ಮಾಣ ಹಂತದ ಚಟುವಟಿಕೆಗಳ ಉದ್ಘಾಟನೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ.ಆರ್ ಶೆಟ್ಟಿ ಅವರು, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯುವುದು ಅಗತ್ಯವಾಗಿದೆ, ಅದು ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುತ್ತದೆ, ಈ ಯೋಜನೆಯು ಯಶಸ್ವಿಯಾಗಲಿ ಎಂದರು. ಶಾಲಾ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರುಕಿಯಾ, ಮುಖ್ಯೋಪಾಧ್ಯಾಯರಾದತಿ. ಮೃದುಲ, ಪಿ.ಟಿ.ಎ ಅಧ್ಯಕ್ಷ . ಕೃಷ್ಣಪ್ರಸಾದ್, ಉಪಾಧ್ಯಕ್ಷರಾದ ವಿಜಿಮೋಲ್, ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್ ಸಂಚಾಲಕ. ಚಂದ್ರಶೇಖರ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಪ್ರಾಂಶುಪಾಲರಾದ ರಮೇಶ್. ಕೆ.ಎನ್ ಸ್ವಾಗತಿಸಿ, ಎನ್. ಎಸ್. ಎಸ್ ಸಂಚಾಲಕ ರಾಜೇಂದ್ರನ್ ವಂದಿಸಿದರು.