HEALTH TIPS

ವಯನಾಡ್ ಲೋಕಸಭೆ ಉಪ ಚುನಾವಣೆ: ಮೊದಲ ಯತ್ನದಲ್ಲೇ ಪ್ರಿಯಾಂಕಾಗೆ ದಾಖಲೆ ಗೆಲುವು!

ನವದೆಹಲಿ: ಕೇರಳದ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 4.1 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದು, ಲೋಕಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ಇವರ ಆಯ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ದನಿಗೆ ಇನ್ನಷ್ಟು ಬಲ ನೀಡಲಿದೆ ಎನ್ನಲಾಗಿದೆ.

ತಾಯಿ ಸೋನಿಯಾಗಾಂಧಿ, ಅಣ್ಣ ರಾಹುಲ್‌ ಸ್ಪರ್ಧಿಸಿದ್ದಾಗ, ಹಿನ್ನೆಲೆಯಲ್ಲಿ ನಿಂತು ಗೆಲುವಿಗೆ ಶ್ರಮಿಸಿದ್ದ ಪ್ರಿಯಾಂಕಾ, ಈಗ ಮುನ್ನೆಲೆಗೆ ಬಂದಿದ್ದಾರೆ.

ಗೆಲುವಿನೊಂದಿಗೆ ಮೂಲಕ ಅಣ್ಣ-ತಂಗಿ ಒಟ್ಟಿಗೇ ಲೋಕಸಭೆಯಲ್ಲಿ ಅಸೀನರಾಗಲಿದ್ದಾರೆ. ತಾಯಿ ಸೋನಿಯಾ ಸದ್ಯ ಪ್ರಸ್ತುತ ರಾಜ್ಯಸಭೆ ಸದಸ್ಯೆ. ಏಕ ಕಾಲದಲ್ಲಿ ಒಂದೇ ಕುಟುಂಬದ ಮೂವರು ಸಂಸತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಬರೇಲಿ, ವಯನಾಡ್‌ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ರಾಹುಲ್‌ಗಾಂಧಿ ಬಳಿಕ ವಯನಾಡ್‌ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಕ್ಷೇತ್ರದಿಂದ ಪ್ರಿಯಾಂಕಾ ಗೆದ್ದಿದ್ದಾರೆ.

ಪ್ರಿಯಾಂಕಾ ಅವರು 4,10,931 ಮತಗಳಿಂದ ಗೆಲುವು ಸಾಧಿಸಿದರು. ಪ್ರಿಯಾಂಕಾ 6,22,338 ಮತ ಪಡೆದರೆ, ಸಮೀಪದ ಅಭ್ಯರ್ಥಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ 2,11,407, ಎನ್‌ಡಿಎಯ ನವ್ಯಾ ಹರಿದಾಸ್‌ 1,09,939 ಮತ ಪಡೆದರು.

ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಒಟ್ಟು 6,47,445 ಮತ ಪಡೆದಿದ್ದು, 3,64,422 ಮತಗಳಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ಗೆಲುವಿನ ಅಂತರವನ್ನು ಇನ್ನಷ್ಟು ಹಿಗ್ಗಿಸಿದ್ದಾರೆ.

'ವಯನಾಡ್‌ ಕ್ಷೇತ್ರದ ಸೋದರ, ಸೋದರಿಯರೇ ನಿಮ್ಮ ಬೆಂಬಲ, ವಿಶ್ವಾಸದಿಂದ ಮನಸ್ಸು ತುಂಬಿ ಬಂದಿದೆ. ನಿಮ್ಮ ಕನಸು ಈಡೇರಿಸಲು, ಹಕ್ಕುಗಳ ಸಾಕಾರಕ್ಕಾಗಿ ಹೋರಾಡಲಿದ್ದೇನೆ' ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

'ಎಕ್ಸ್‌' ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, 'ನನ್ನ ಮಾರ್ಗದರ್ಶಕರಾಗಿ ಹಾಗೂ ಬೆನ್ನ ಹಿಂದೆ ನಿಂತು ಪ‍್ರೋತ್ಸಾಹಿಸಿದ ರಾಹುಲ್‌ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.

'ಯುಡಿಎಫ್‌ನ ನಾಯಕರು, ಪ್ರಚಾರದಲ್ಲಿ ಅವಿರತ ತೊಡಗಿದ್ದ ಎಲ್ಲ ಕಾರ್ಯಕರ್ತರು, ತಾಯಿ ಹಾಗೂ ಪತಿ ರಾಬರ್ಟ್‌ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರು ನೀಡಿದ ಸಹಕಾರ, ಬೆಂಬಲಕ್ಕಾಗಿ ಕೃತಜ್ಞತೆಗಳು' ಎಂದು ಹೇಳಿದ್ದಾರೆ.: ಕೇರಳದ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 4.1 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದು, ಲೋಕಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ಇವರ ಆಯ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ದನಿಗೆ ಇನ್ನಷ್ಟು ಬಲ ನೀಡಲಿದೆ ಎನ್ನಲಾಗಿದೆ.

ತಾಯಿ ಸೋನಿಯಾಗಾಂಧಿ, ಅಣ್ಣ ರಾಹುಲ್‌ ಸ್ಪರ್ಧಿಸಿದ್ದಾಗ, ಹಿನ್ನೆಲೆಯಲ್ಲಿ ನಿಂತು ಗೆಲುವಿಗೆ ಶ್ರಮಿಸಿದ್ದ ಪ್ರಿಯಾಂಕಾ, ಈಗ ಮುನ್ನೆಲೆಗೆ ಬಂದಿದ್ದಾರೆ.

ಗೆಲುವಿನೊಂದಿಗೆ ಮೂಲಕ ಅಣ್ಣ-ತಂಗಿ ಒಟ್ಟಿಗೇ ಲೋಕಸಭೆಯಲ್ಲಿ ಅಸೀನರಾಗಲಿದ್ದಾರೆ. ತಾಯಿ ಸೋನಿಯಾ ಸದ್ಯ ಪ್ರಸ್ತುತ ರಾಜ್ಯಸಭೆ ಸದಸ್ಯೆ. ಏಕ ಕಾಲದಲ್ಲಿ ಒಂದೇ ಕುಟುಂಬದ ಮೂವರು ಸಂಸತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಬರೇಲಿ, ವಯನಾಡ್‌ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ರಾಹುಲ್‌ಗಾಂಧಿ ಬಳಿಕ ವಯನಾಡ್‌ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಕ್ಷೇತ್ರದಿಂದ ಪ್ರಿಯಾಂಕಾ ಗೆದ್ದಿದ್ದಾರೆ.

ಪ್ರಿಯಾಂಕಾ ಅವರು 4,10,931 ಮತಗಳಿಂದ ಗೆಲುವು ಸಾಧಿಸಿದರು. ಪ್ರಿಯಾಂಕಾ 6,22,338 ಮತ ಪಡೆದರೆ, ಸಮೀಪದ ಅಭ್ಯರ್ಥಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ 2,11,407, ಎನ್‌ಡಿಎಯ ನವ್ಯಾ ಹರಿದಾಸ್‌ 1,09,939 ಮತ ಪಡೆದರು.

ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಒಟ್ಟು 6,47,445 ಮತ ಪಡೆದಿದ್ದು, 3,64,422 ಮತಗಳಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ಗೆಲುವಿನ ಅಂತರವನ್ನು ಇನ್ನಷ್ಟು ಹಿಗ್ಗಿಸಿದ್ದಾರೆ.

'ವಯನಾಡ್‌ ಕ್ಷೇತ್ರದ ಸೋದರ, ಸೋದರಿಯರೇ ನಿಮ್ಮ ಬೆಂಬಲ, ವಿಶ್ವಾಸದಿಂದ ಮನಸ್ಸು ತುಂಬಿ ಬಂದಿದೆ. ನಿಮ್ಮ ಕನಸು ಈಡೇರಿಸಲು, ಹಕ್ಕುಗಳ ಸಾಕಾರಕ್ಕಾಗಿ ಹೋರಾಡಲಿದ್ದೇನೆ' ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

'ಎಕ್ಸ್‌' ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, 'ನನ್ನ ಮಾರ್ಗದರ್ಶಕರಾಗಿ ಹಾಗೂ ಬೆನ್ನ ಹಿಂದೆ ನಿಂತು ಪ‍್ರೋತ್ಸಾಹಿಸಿದ ರಾಹುಲ್‌ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.

'ಯುಡಿಎಫ್‌ನ ನಾಯಕರು, ಪ್ರಚಾರದಲ್ಲಿ ಅವಿರತ ತೊಡಗಿದ್ದ ಎಲ್ಲ ಕಾರ್ಯಕರ್ತರು, ತಾಯಿ ಹಾಗೂ ಪತಿ ರಾಬರ್ಟ್‌ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರು ನೀಡಿದ ಸಹಕಾರ, ಬೆಂಬಲಕ್ಕಾಗಿ ಕೃತಜ್ಞತೆಗಳು' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad

ಜಾಹಿರಾತು

Qries