HEALTH TIPS

ಅಸ್ತಿ ಸಂಚಯನಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ವಿಹಿಂಪದಿಂದ ಮನವಿ

ಕಾಸರಗೋಡು,: ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ಘಟಕ ನೇತೃತ್ವದಲ್ಲಿ ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅವರನ್ನು ಭೇಟಿಯಾಗಿ ಅಸ್ತಿ ಸಂಚಯನಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಯಿತು. 

ಹಿಂದೂ ಸಂಪ್ರದಾಯ ಪ್ರಕಾರ  ದೈವಾಧೀನರಾಗುವವರಿಗೆ ಮೋಕ್ಷಕ್ಕಾಗಿ ಆಸ್ತಿ ವಿಸರ್ಜನೆಗೈಯ್ಯಲು ಸೂಕ್ತ ಜಾಗವನ್ನು ಕಲ್ಪಿಸಬೇಕೆಂದು ವಿನಂತಿಸಲಾಯಿತು. ಈ ನಿಯೋಗದಲ್ಲಿ ವಿಶ್ವಹಿಂದೂ ಪರಿಷತ್ ನಗರ ಘಟಕ ಅಧ್ಯಕ್ಷ  ಗುರುಪ್ರಸಾದ್ ಕೋಟೆಕಣಿ, ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ನಗರಸಭಾ ಸದಸ್ಯರುಗಳಾದ ವರಪ್ರಸಾದ್ ಕೋಟೆಕಣಿ, ಅಜಿತ್ ಕುಮಾರ್, ವೀಣಾ ಅರುಣ್ ಶೆಟ್ಟಿ, ಉಮಾ, ಶ್ರೀಲತಾ ಟೀಚರ್, ರಜನಿ ಮೊದಲಾದವರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries