HEALTH TIPS

ಮಾಧ್ಯಮಗಳ ಗುಣಮಟ್ಟ ಮತ್ತು ಸಮಗ್ರತೆ ನಶಿಸಿದೆ: ಹೊಸ ಡಿಜಿಟಲ್ ಸವಾಲುಗಳನ್ನು ಎದುರಿಸಲು ನಿಯಂತ್ರಣ ಅಗತ್ಯ: ರಾಜೀವ್ ಚಂದ್ರಶೇಖರ್

ಕೋಝಿಕ್ಕೋಡ್: ಮಾಧ್ಯಮ ಕ್ಷೇತ್ರದಲ್ಲಿ ಆರ್ಥಿಕ ಆಸಕ್ತಿ ಹೆಚ್ಚಿದಂತೆ ಮಾಧ್ಯಮಗಳ ಗುಣಮಟ್ಟ ಮತ್ತು ಸಮಗ್ರತೆ ಕಣ್ಮರೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ದೇಶದಲ್ಲಿ ಎಷ್ಟೆಷ್ಟು ಮಾಧ್ಯಮಗಳು ಕೆಲಸ ಮಾಡುತ್ತಿವೆ ಎಂದು ಲೆಕ್ಕ ಹಾಕಲೂ ಸಾಧ್ಯವಿಲ್ಲ. ಗಲಭೆ ಸೃಷ್ಟಿಸಲು ಬಾಂಬ್, ಚಾಕು ಬೇಕಿಲ್ಲ, ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳೇ ಸಾಕು. ಒಂದು ಸುಳ್ಳು ಸತ್ಯಕ್ಕಿಂತ ವೇಗವಾಗಿ ಮತ್ತು ವ್ಯಾಪಕವಾಗಿ ಹರಡಬಹುದು ಎಂದವರು ವರ್ತಮಾನ ತೆರೆದಿಟ್ಟರು.

 ‘ಜನ್ಮಭೂಮಿ’ ಸುವರ್ಣ ಜಯಂತಿ ಆಚರಣೆಯ ಅಂಗವಾಗಿ ನಡೆದ ಮಾಧ್ಯಮ ವಿಚಾರ ಸಂಕಿರಣದಲ್ಲಿ ಅವರು ವಿಷಯ ಮಂಡಿಸಿ ಮಾತನಾಡಿದರು. 

ಮಾಧ್ಯಮಗಳು ಪ್ರಜಾಪ್ರಭುತ್ವದ ದಾರಿದೀಪ. ಭಾರತದ ಸಂದರ್ಭದಲ್ಲಿ ಯೋಚಿಸಿದರೆ, ದೇಶ, ಪ್ರಜಾಪ್ರಭುತ್ವ ಮತ್ತು ಮಾಧ್ಯಮಗಳು ಒಂದು ಮಹತ್ವದ ಘಟ್ಟದಲ್ಲಿವೆ. ಪ್ರಜಾಪ್ರಭುತ್ವ ಮತ್ತು ಮಾಧ್ಯಮವನ್ನು ಎರಡಾಗಿ ನೋಡಲು ಸಾಧ್ಯವಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವದ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ದೊಡ್ಡದು. ತುರ್ತುಪರಿಸ್ಥಿತಿಯ ಕಾಲದಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರು ಇಲ್ಲದಿದ್ದರೆ ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ವರ್ಷಗಟ್ಟಲೆ ಇರುತ್ತಿತ್ತು.

ಮಾಧ್ಯಮದ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪರಸ್ಪರ ಪೂರಕವಾಗಿದೆ. ವಾಕ್ ಸ್ವಾತಂತ್ರ್ಯ ಅತ್ಯಗತ್ಯವಾಗಿದ್ದರೂ, ಅದನ್ನು ಸುಳ್ಳುಗಳನ್ನು ಹರಡಲು ಮುಚ್ಚಳವಾಗಿ ಬಳಸಬಾರದು. ಹೊಸ ಡಿಜಿಟಲ್ ಸವಾಲುಗಳಿಗೆ ನ್ಯಾಯೋಚಿತ ನಿಯಂತ್ರಣದ ಅಗತ್ಯವಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಅಪರಾಧದಲ್ಲಿ ತೊಡಗಿಸಿಕೊಳ್ಳುವ ಅವಕಾಶವಾಗಿ ನೋಡುವವರಿಗೆ ಶಿಕ್ಷೆಯಾಗಬೇಕು ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಡಿಜಿಟಲ್ ಮಾಧ್ಯಮದ ಪ್ರಸರಣ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಸಾಂಪ್ರದಾಯಿಕ ಮಾಧ್ಯಮ ಕ್ರಮಗಳನ್ನು ಬದಲಾಯಿಸಿದೆ. ಇಂದು ದೇಶದಲ್ಲಿ 90 ಕೋಟಿ ಜನ ಇಂಟರ್ ನೆಟ್ ಅವಲಂಬಿತರಾಗಿದ್ದಾರೆ. 2026ರ ವೇಳೆಗೆ ಇದು 120 ಕೋಟಿ ಆಗಲಿದೆ. ಎರಡು ದಶಕಗಳ ಹಿಂದಿನವರೆಗೂ ಪ್ರತಿ ಮಾಧ್ಯಮ ಮತ್ತು ಪತ್ರಕರ್ತರ ನಿಲುವುಗಳನ್ನು ಓದುಗರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಮಾಧ್ಯಮಗಳೂ ತಮ್ಮ ನಿಲುವುಗಳನ್ನು ಸಾರ್ವಜನಿಕವಾಗಿ ಹೇಳಲು ಸಿದ್ಧವಾಗಿದ್ದವು. ಇಂದದು ಮರೆಯಾಗಿವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಎಸ್ ಗುರುಮೂರ್ತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಜನ್ಮಭೂಮಿ ಸಂಪಾದಕ ಕೆ.ಎನ್.ಆರ್.ನಂಬೂದಿರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಪಾದಕ ಕೆವಿಎಸ್ ಹರಿದಾಸ್, ಮ್ಯಾಕೋ ನಿರ್ದೇಶಕ ಎ.ಕೆ.ಅನುರಾಜ್, ಕಣ್ಣೂರು ಎಸ್.ಎನ್.ಕಾಲೇಜು ಪ್ರಾಂಶುಪಾಲ ಡಾ. ಸಿ.ಪಿ.ಸತೀಶ್, ಎಂ.ಸುಧೀಂದ್ರಕುಮಾರ್, ಎಂ.ಎನ್.ಸುಂದರರಾಜ್ ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries