HEALTH TIPS

ಸ್ಪೇನ್‌ ಪ್ರವಾಹ | ರಾಜನ ಮೇಲೆ ಕೆಸರು ಎರಚಿದ ಸಂತ್ರಸ್ತರು

        ಲೆನ್ಸಿಯಾ: ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರನ್ನು ಭೇಟಿಯಾಗಲು ರಾಜ ‌ಆರನೇ ಫಿಲೀಪೆ ಹಾಗೂ ಅವರ ಪತ್ನಿ ರಾಣಿ ಲೆಟಿಜಿಯಾ ಅವರು ಪೈಪೋರ್ಥಾ ನಗರಕ್ಕೆ ಭಾನುವಾರ ಬಂದಿದ್ದರು. ಈ ವೇಳೆ ಅವರ ಮೇಲೆ ಸಂತ್ರಸ್ತರು ಕೆಸರು ಎರಚಿದ್ದಾರೆ.

        'ಇಲ್ಲಿಂದ ಹೊರ ನಡೆಯಿರಿ', 'ಕೊಲೆಗಡುಕರು' ಎಂದು ಘೋಷಣೆ ಕೂಗಿದ್ದಾರೆ.

ಪ್ರವಾಹ ಸಂಭವಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ ಹಾಗೂ ರಾಣಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಒಟ್ಟು 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ಪೈಪೋರ್ಥಾ ನಗರವೊಂದರಲ್ಲಿಯೇ 60 ಮಂದಿ ಮೃತಪಟ್ಟಿದ್ದಾರೆ. ಸಂತ್ರಸ್ತರಿಗೆ ರಾಜ ಹಾಗೂ ರಾಣಿ ಅವರಿಗಿಂತ ಪ್ರಧಾನಿ ಪೆದ್ರೊ ಸ್ಯಾಂಚೆಸ್‌ ಅವರ ಮೇಲೆಯೇ ಹೆಚ್ಚು ಆಕ್ರೋಶವಿದೆ ಎನ್ನಲಾಗುತ್ತಿದೆ.

            ಪ್ರವಾಹದ ಬಳಿಕ ಸರ್ಕಾರವು ಪರಿಹಾರ ಹಾಗೂ ಸಂತ್ರಸ್ತರಿಗೆ ನೆರವು ನೀಡುವ ಕುರಿತು ನಿರ್ಲಕ್ಷ್ಯ ಧೋರಣೆ ತೋರಿದೆ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ರಾಜ ಹಾಗೂ ರಾಣಿಯ ಮೇಲೆ ಜನರು ಕೆಸರು ಎರೆಚಿದ್ದಾರೆ. ಇವರೊಂದಿಗೆ ಬಂದಿದ್ದ ಹಲವು ಅಧಿಕಾರಿಗಳ ಮೇಲೆಯೂ ಸಾರ್ವಜನಿಕರು ಕೆಸರು ಎರೆಚಿದ್ದಾರೆ.

              ಈ ಮಧ್ಯೆಯು ಇಬ್ಬರು ಸಂತ್ರಸ್ತರನ್ನು ಮಾತನಾಡಿಸಲು ಯತ್ನಿಸಿದರು. ಭದ್ರತಾ ಪಡೆಗಳು ಕೊಡೆ ಹಿಡಿದು ಇಬ್ಬರನ್ನು ರಕ್ಷಿಸಿದರು. ಬಳಿಕ ತಮ್ಮ ಭೇಟಿಯನ್ನು ರಾಜ ಹಾಗೂ ರಾಣಿ ಮೊಟಕುಗೊಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries