HEALTH TIPS

ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ಸ್ಪರ್ಧೆ: ಕೇರಳ ಸಿಎಂ

 ತಿರುವನಂತಪುರ: 'ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪಿಣರಾಯಿ ವಿಜಯನ್, 'ಕಾಂಗ್ರೆಸ್ ಪಕ್ಷದ ಜಾತ್ಯತೀತ ಮುಖವಾಡ ಬಯಲಾಗಿದೆ' ಎಂದು ಹೇಳಿದ್ದಾರೆ.

'ಪ್ರಿಯಾಂಕಾ ಗಾಂಧಿ ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ನಿಲುವೇನು? ಜಮಾತ್-ಎ-ಇಸ್ಲಾಮಿ ಸಿದ್ಧಾಂತವು ಪ್ರಜಾಪ್ರಭುತ್ವದೊಂದಿಗೆ ಹೊಂದಿಕೆಯಾಗುತ್ತದೆಯೇ' ಎಂದು ಪ್ರಶ್ನಿಸಿದ್ದಾರೆ.

'ಜಮಾತ್-ಎ-ಇಸ್ಲಾಮಿ ಸಂಘಟನೆ ದೇಶ ಅಥವಾ ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ. ಜಮ್ಮು-ಕಾಶ್ಮೀರದಲ್ಲೂ ಬಹಳ ಹಿಂದಿನಿಂದಲೂ ಚುನಾವಣೆಗಳನ್ನು ವಿರೋಧಿಸಿತ್ತು. ಬಳಿಕ ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು' ಎಂದು ಆರೋಪಿಸಿದ್ದಾರೆ.

'ವಯನಾಡ್‌ನಲ್ಲಿರುವ ಜಮಾತ್-ಎ-ಇಸ್ಲಾಮಿ, ಕಾಶ್ಮೀರದಲ್ಲಿರುವ ಜಮಾತ್-ಎ-ಇಸ್ಲಾಮಿಗಿಂತ ವಿಭಿನ್ನ ಎಂದು ಹೇಳಿಕೊಳುತ್ತದೆ. ಆದರೆ ಸಿದ್ಧಾಂತ ಒಂದೇ ಅಲ್ಲವೇ ? ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

'ಜಮಾತ್-ಎ-ಇಸ್ಲಾಮಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ. ಮುಸ್ಲಿಂ ಲೀಗ್ ಸೇರಿದಂತೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಜಮಾತ್-ಎ-ಇಸ್ಲಾಮಿ ಬೆಂಬಲಕ್ಕಾಗಿ ತ್ಯಾಗ ಮಾಡುತ್ತಿರುವಂತೆ ತೋರುತ್ತಿದೆ. ಜಮಾತ್-ಎ-ಇಸ್ಲಾಮಿ ಮತಗಳನ್ನು ತಿರಸ್ಕರಿಸಲು ಕಾಂಗ್ರೆಸ್‌ಗೆ ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries