ಉಪ್ಪಳ: ಬಂದ್ಯೋಡು ಸನಿಹದ ಕಯ್ಯಾರು ಕ್ರಿಸ್ತ ರಾಜ ಇಗರ್ಜಿಯ ವಾರ್ಷಿಕ ಮಹೋತ್ಸವ ಹಾಗೂ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಗ್ಲ್ಯಾಡ್ಸಮ್ ನ ನಿರ್ದೇಶಕ ಫಾ. ಹ್ಯಾರಿ ಡಿ ಸೋಜ ದಿವ್ಯ ಬಲಿ ಪೂಜೆ ಹಾಗೂ ಪರಮ ಪ್ರಸಾದದ ವಿಧಿ ವಿಧಾನ ನೆರವೇರಿಸಿದರು. ಬಲಿಪೂಜೆಯಲ್ಲಿ ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಫಾ. ವಿಶಾಲ್ ಮೋನಿಸ್, ಪೆರ್ಮುದೆ ಸಂತ ಲೋರೆನ್ಸ್ ಚರ್ಚ್ ಧರ್ಮ ಗುರು ಫಾ. ಹೆರಾಲ್ಡ್ ಡಿ ಸೋಜ, ಸಹಾಯಕ ಧರ್ಮಗುರು ಫಾ. ಕ್ಲೋಡ್ ಕೋರ್ಡಾ, ಮೈಸೂರು ಪುಷ್ಪಾಶ್ರಮದ ಡೀನ್ ಫಾ. ಓಸ್ವಾಲ್ಡ್ ಕ್ರಾಸ್ತ ಉಪಸ್ಥಿತರಿದ್ದರು. ಬಲಿ ಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ಕಯ್ಯಾರು ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ ಸೋಜ, ಕಾರ್ಯದರ್ಶಿ ಝೀನಾ ಡಿ ಸೋಜ ಹಾಗೂ ಪಾಲನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.