HEALTH TIPS

ಕಾಸರಗೋಡಿನ ವಿವಿಧೆಡೆ ಬಿರುಸಿನ ಮಳೆ-ದೇವಾಲಯದೊಳಗೆ ನುಗ್ಗಿದ ನೆರೆನೀರು

ಪೆರ್ಲ : ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಗುಡುಗಿನಿಂದ ಕೂಡಿದ ಬಿರುಸಿನ ಮಳೆಯಾಗಿದೆ. ಹಗಲು ಹೊತ್ತು ಬಿರು ಬಿಸಿಲಿದ್ದರೆ, ಗುಡುಗು, ಮಿಂಚಿನಿಂದ ಕೂಡಿದ ಸಂಜೆಯಾಗುತ್ತಿದ್ದಂತೆ ಮಳೆಯಾಗಿದೆ. ಪೆರ್ಲ ಆಸುಪಾಸು ಭಾರೀ ಮಳೆಯಾಗಿದ್ದು, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಾಂಗಣದೊಳಗೆ  ಮಳೆನೀರು ನುಗ್ಗಿದೆ. ಹೊರಾಂಗಣದಲ್ಲಿ ಶಾಶ್ವತ ಚಪ್ಪರವಿದ್ದರೂ, ಏಕಾಏಕಿ ಸುರಿದ ಮಳೆಗೆ ಅಂಗಣದೊಳಗೆ ಮಳೆನೀರು ಹರಿದು ಬಂದಿದೆ. ದೇವಾಲಯ ಪ್ರಾಂಗಣದೊಳಗೆ ಇದೇ ಮೊದಲ ಬಾರಿಗೆ ಮಳೆನೀರು ನುಗ್ಗಿದೆ. ಕೇರಳದ ಎಂಟು ಜಿಲ್ಲೆಗಳಲ್ಲಿ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು. ಜಿಲ್ಲೆಯ ಮಲೆನಾಡು ಪ್ರದೇಶ, ಕನ್ಣೂರು ಜಿಲ್ಲೆಯಲ್ಲೂ ಬಿರುಸಿನ ಮಳೆಯಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries